ಬೆಂಗಳೂರು: ಇಂದಿನ ದಿನಗಳಲ್ಲಿ ಟ್ಯೂಷನ್ ಹೆಸರಿನಲ್ಲಿ ಟುಟೋರಿಯಲ್‍ಗಳು ಶಿಕ್ಷಣವನ್ನು ಒಂದು ಉದ್ಯಮ ಮಾಡಿಕೊಂಡಿವೆ. ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಹಣವನ್ನು ಪೀಕ್ತಿವೆ. ಅದ್ರೆ ಇಲ್ಲೊಬ್ರು ಮೇಷ್ಟ್ರು ಮಾತ್ರ ಫ್ರೀಯಾಗಿಯೇ ತಮ್ಮ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ. ಇವರೇ ಇಂದಿನ ನಮ್ಮ ಪಬ್ಲಿಕ್ ಹಿರೋ.
Advertisement
ಹೌದು. ಬೆಂಗಳೂರಿನ ಸಂಜಯ್ ನಗರದ ನಿವಾಸಿ 73 ವರ್ಷದ ರಾಜಶೇಖರಯ್ಯ ಮೇಷ್ಟ್ರು ಹೆಚ್‍ಎಎಲ್‍ನ ನಿವೃತ್ತ ನೌಕರರು. ಕಳೆದ 50 ವರ್ಷಗಳಿಂದ ಮನೆಯಲ್ಲಿ `ರಶ್ಮಿ’ ಹೆಸರಿನಲ್ಲಿ ಟುಟೋರಿಯಲ್ ನಡೆಸುತ್ತಿದ್ದು, ಪಿಯುಸಿ, ಬಿಕಾಂ, ಬಿಬಿಎಂ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಫ್ರೀಯಾಗಿ ಟ್ಯೂಷನ್ ಹೇಳಿಕೊಡ್ತಾ ಇದ್ದಾರೆ.
Advertisement
Advertisement
ರಾಜಶೇಖರಯ್ಯ ಅವರು ವಿದ್ಯಾರ್ಥಿಯಾಗಿದ್ದಾಗ ಗುರುಗಳಾದ ಟಿ ಆರ್ ಶಾಮಣ್ಣನವರು, `ನಿನ್ನ ಜ್ಞಾನವನ್ನು ಜೀವನ ಪೂರ್ತಿ ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕೆಂದು’ ಭಾಷೆ ಪಡೆದಿದ್ರಂತೆ. ಅಂದಿನಿಂದ ಇವತ್ತಿನವರೆಗೂ ಕೊಟ್ಟ ಭಾಷೆಯಂತೆ ನಡೆದುಕೊಳ್ಳುತ್ತಿದ್ದಾರೆ. ಈವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಬಳಿ ಟ್ಯೂಷನ್ ಪಡೆದಿದ್ದು, ದೇಶ ವಿದೇಶಗಳಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದಾರೆ. ಬೆಳಗ್ಗೆ 5 ಗಂಟೆಗೆ ಟ್ಯೂಷನ್ ಶುರುಮಾಡಿದ್ರೆ ರಾತ್ರಿ 10 ಗಂಟೆವರೆಗೂ ಟ್ಯೂಷನ್ ಹೇಳಿಕೊಡ್ತಾರೆ.
Advertisement