ಹುಬ್ಬಳ್ಳಿ: ಟೆರೇಸ್ ಗಾರ್ಡನಿಂಗ್ ಬಹುತೇಕರಿಗೆ ಅಚ್ಚು ಮೆಚ್ಚು. ತರಕಾರಿ ಸೊಪ್ಪುಸೊದೆ ಬೆಳೆಯೋಕೆ ಪ್ರಯತ್ನಿಸುತ್ತಿರುತ್ತಾರೆ. ಇದು ಕೆಲವೊಮ್ಮೆ ಯಶಸ್ವಿಯಾಗೋದು ಕಷ್ಟ. ಆದರೆ ಪಬ್ಲಿಕ್ ಹೀರೋ ಹುಬ್ಬಳ್ಳಿಯ ಎಂಜಿನಿಯರ್ ರಾಘವೇಂದ್ರ ಅವರು ಟೆರೇಸ್‍ನಲ್ಲಿ ಮಣ್ಣು ರಹಿತವಾಗಿ ತೋಟ ನಿರ್ಮಿಸಿ ಸಕ್ಸಸ್ ಆಗಿದ್ದಾರೆ.
ಹುಬ್ಬಳ್ಳಿಯ ಶಿರೂರ್‍ಪಾರ್ಕ್ ನಿವಾಸಿಯಾದ ರಾಘವೇಂದ್ರ ಕೊಣ್ಣೂರ್ ಅವರ ಆಸಕ್ತಿಯಿಂದ ಈ ಟೆರೇಸ್ ತೋಟ ನಳನಳಿಸ್ತಿದೆ. ವೃತ್ತಿಯಲ್ಲಿ ಎಂಜಿಯರ್ ಆಗಿರೋ ರಾಘವೇಂದ್ರ ಅವರಿಗೆ ಕೃಷಿ ಅಂದರೆ ಅಚ್ಚುಮೆಚ್ಚು. ಹಾಗಾಗಿ, ಮನೆ ಮೇಲೆಯೇ ಇನೊವೇಟಿವ್ ಟೆರೇಸ್ ಗಾರ್ಡನ್ ಬೆಳೆಸಿದ್ದಾರೆ. ಇದರ ಮತ್ತೊಂದು ವಿಶೇಷ ಅಂದರೆ ಮಣ್ಣು ರಹಿತವಾಗಿ, ಪಾಲಿಹೌಸ್ ಇಲ್ಲದೆಯೇ `ಕೋಕೋ ಪೀಟ್’ ಕೃಷಿ ಪದ್ಧತಿ ಅಳವಡಿಕೆ.
ರಾಘವೇಂದ್ರ ಅವರ ಮನೆಯಲ್ಲಿ 10 ಮಂದಿ ಇದ್ದು, ಎಲ್ಲರೂ ಈ ತೋಟದ ಪೋಷಣೆಯಲ್ಲಿ ಭಾಗಿಯಾಗ್ತಾರೆ. ಮನೆಯ ತರಕಾರಿಗಳ ವೆಸ್ಟೇಜ್ ಸಂಸ್ಕರಿಸಿ ಸಸಿಗಳಿಗೆ ಗೊಬ್ಬರವಾಗಿ ಉಪಯೋಗಿಸುತ್ತಾರೆ. ಮನೆಗೆ ಬೇಕಾದ ಎಲ್ಲಾ ಬಗೆಯ ತರಕಾರಿಯನ್ನ ರಾಸಾಯನಿಕ ಬಳಸದೆ ಬೆಳೆಯುತ್ತಿದ್ದಾರೆ.
ಕೇವಲ ತಮ್ಮ ಕುಟುಂಬಕ್ಕೆ ಸೀಮಿತವಾಗದ ಈ ಟೆರೇಸ್ ತೋಟಗಾರಿಕೆ ಬಗ್ಗೆ ಬೆಂಗಳೂರು, ಮೈಸೂರು ಹೀಗೆ ರಾಜ್ಯದ ನಾನಾ ಭಾಗಗಳಲ್ಲಿ ರಾಘವೇಂದ್ರ ಕೊಣ್ಣೂರ್ ಅವರು ಉಚಿತವಾಗಿ ನೂರಾರು ಉಪನ್ಯಾಸ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=LDvvXE3KMfQ