ಹಾವೇರಿ: ಮನಸ್ಸಿದ್ದರೆ ಮಾರ್ಗ ಅನ್ನೋದಕ್ಕೆ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ಹಲವರ ಸಾಧನೆಯನ್ನು ತೋರಿಸಿದ್ದೇವೆ. ಅದೇ ರೀತಿ ಇವತ್ತಿನ ಪಬ್ಲಿಕ್ ಹೀರೋ ರಾಘವೇಂದ್ರ ಅವರು ಹಾವೇರಿಯ ಶಿಗ್ಗಾಂವಿ ತಾಲೂಕಿನ ಇವರು ಗಾರ್ಮೆಂಟ್ಸ್ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗದಾತರಾಗಿದ್ದಾರೆ.
ಹೌದು. ಹಾವೇರಿಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿರೋ ಪ್ರಭಂಜನ್ ಗಾರ್ಮೆಂಟ್ಸ್ ಸ್ಥಾಪಕ ರಾಘವೇಂದ್ರ ಮೇಲಗೇರಿ ಅವರೇ ಇವತ್ತಿನ ಪಬ್ಲಿಕ್ ಹೀರೋ. ಬಿ.ಎ ಪದವೀಧರರಾಗಿರೋ ರಾಘವೇಂದ್ರ ಮೊದಲಿಗೆ ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಶಿಗ್ಗಾಂವಿ ತಾಲೂಕಿನಲ್ಲಿ ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡ್ತಿದ್ರು. ಆದರೆ, ಉದ್ಯೋಗಕ್ಕಾಗಿ ಪಟ್ಟಣಕ್ಕೆ ಗುಳೆಹೋಗೋ ಗ್ರಾಮೀಣ ಜನತೆಯನ್ನು ನೋಡಿದ ರಾಘವೇಂದ್ರ ಅವರು ಗುತ್ತಿಗೆದಾರ ಕೆಲಸಕ್ಕೆ ಗುಡ್‍ಬೈ ಹೇಳಿದ್ರು. ಸ್ನೇಹಿತರ ಜೊತೆ ಸೇರಿ ಗಾರ್ಮೆಂಟ್ಸ್ ಓಪನ್ ಮಾಡಿದ್ರು.
Advertisement
Advertisement
ಬಂಕಾಪುರ ಪಟ್ಟಣದಲ್ಲಿ ಕಳೆದ ಮಾರ್ಚ್ ನಲ್ಲಿ ಪ್ರಭಂಜನ್ ಇಂಡಸ್ಟ್ರೀಸ್ ಗಾರ್ಮೆಂಟ್ಸ್ ಸ್ಥಾಪನೆಯಾಗಿದ್ದು ಈಗ 380ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದಾರೆ. ವಿಕಲಚೇತನರಿಗೂ ಅವಕಾಶ ಕೊಟ್ಟಿದ್ದಾರೆ. ಇದರಿಂದ ಬೆಂಗಳೂರು, ಹುಬ್ಬಳ್ಳಿಗೆ ಗುಳೇಹೋಗೋದು ತಪ್ಪಿದೆ. ಸಂಬಳ, ಇಎಸ್‍ಐ, ಪಿಎಫ್ ಯಾವ ಸಮಸ್ಯೆಯೂ ಇಲ್ಲ ಅಂತ ಉದ್ಯೋಗಿ ಆಶಾ ಹೇಳಿದ್ದಾರೆ.
Advertisement
ವಾರ್ಷಿಕ 40 ರಿಂದ 50 ಸಾವಿರ ಶರ್ಟ್ಸ್ ಸಿದ್ಧಪಡಿಸ್ತಿರೋ ಪ್ರಭಂಜನ್ ಗಾರ್ಮೆಂಟ್ಸ್, ಬೆಂಗಳೂರು, ಗುಜರಾತ್ ಸೇರಿದಂತೆ ವಿದೇಶಕ್ಕೂ ರಫ್ತು ಮಾಡ್ತಿದೆ.