ತುಮಕೂರು: ಪಾವಗಡ ತಾಲೂಕು ಬರದಿಂದಲೇ ಸುದ್ದಿಯಲ್ಲಿರುತ್ತೆ. ಆದ್ರೆ ಇಲ್ಲಿನ ರೈತ ಪೂಜಾರಪ್ಪಗೆ ಇದರ ಬಿಸಿ ಇಲ್ಲ. ಹೂವಿನಿಂದಲೇ ಬದುಕು ರೂಪಿಸಿಕೊಂಡು ಅದರಿಂದ ಬರೋ ಆದಾಯವನ್ನ ರೈತ ಹೋರಾಟಕ್ಕೆ ಮೀಸಲಿಟ್ಟಿದ್ದಾರೆ.
ತುಮಕೂರಿನ ಬರದ ತಾಲೂಕು ಪಾವಗಡದ ಬ್ಯಾಡನೂರು ದೊಡ್ಡಹಟ್ಟಿ ಗ್ರಾಮದ ರೈತ ಪೂಜಾರಪ್ಪ ಅವರು ತಾಲೂಕಿನ ರೈತರ ವಿಷಯ ಬಂದಾಗ ಸದಾ ಮುಂಚೂಣಿಯಲ್ಲಿ ಇರುತ್ತಾರೆ. ಕಳೆದ 6 ವರ್ಷಗಳಿಂದ ರಾಜ್ಯ ರೈತ ಸಂಘದ ಪಾವಗಡ ತಾಲೂಕು ಅಧ್ಯಕ್ಷರಾಗಿದ್ದಾರೆ. ರೈತರ ಹೋರಾಟಕ್ಕಾಗಿ ತನ್ನ ಜಮೀನಿನಲ್ಲಿ ಬೆಳೆಯುತ್ತಿರುವ ಕಾಕಡಾ ಹೂವಿನ ಶೇ.80 ರಷ್ಟು ಸಂಪಾದನೆಯನ್ನ ಮೀಸಲಾಗಿಟ್ಟಿದ್ದಾರೆ. 4 ಎಕರೆ ಕಾಕಡಾ ಹೂವಿನಿಂದ ವರ್ಷಕ್ಕೆ ಏನಿಲ್ಲಾ ಅಂದ್ರೂ 8 ಲಕ್ಷ ರೂ.ನಷ್ಟು ಹಣ ಸಂಪಾದಿಸ್ತಾರೆ.
Advertisement
Advertisement
ಪಾವಗಡದಿಂದ ಮಧುಗಿರಿವರೆಗೆ ಎಳೆಯಲಾದ ಪವರ್ ಗ್ರಿಡ್ ಲೈನ್ ವಿರುದ್ಧ ಹೋರಾಟ ನಡೆಸಿ ನೂರಾರು ರೈತರಿಗೆ 120 ಕೋಟಿ ರೂ. ಪರಿಹಾರ ಕೊಡಿಸಿದ್ದಾರೆ. ವಿಶ್ವವಿಖ್ಯಾತ ಸೋಲಾರ್ ಪ್ಲಾಂಟ್ ಗೆ ರೈತರ ಜಮೀನು ಭೋಗ್ಯಕ್ಕೆ ಪಡೆದಿರೋ ಸರ್ಕಾರ ಮೊದಲಿಗೆ ಎಕರೆಗೆ ಕೇವಲ 16 ಸಾವಿರ ರೂಪಾಯಿ ನಿಗದಿ ಮಾಡಿತ್ತು. ಆದ್ರೆ ಇದನ್ನ 22 ಸಾವಿರಕ್ಕೆ ಹೆಚ್ಚುವಂತೆ ಮಾಡಿದ್ದು ಇದೇ ಪೂಜಾರಪ್ಪ ಅವರು.
Advertisement
ಯಾವುದೇ ಆಮಿಷಕ್ಕೂ ಒಳಗಾಗದೆ 53ರ ವಯಸ್ಸಿನಲ್ಲೂ ಹೋರಾಡ್ತಿರೋ ಪೂಜಾರಪ್ಪಗೆ ಪಾವಗಡ ರೈತರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
Advertisement
https://www.youtube.com/watch?v=84bqxAY0dm8