ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದಲ್ಲಿರುವ ಗ್ರಾಮ ಪಂಚಾಯ್ತಿ ಕಟ್ಟಡವನ್ನು ಸ್ವತಃ ಗ್ರಾಮಸ್ಥರೇ ನಿರ್ಮಾಣ ಮಾಡಿಕೊಂಡಿದ್ದು, ಇದೀಗ ಎಲ್ಲರಿಗೂ ಮಾದರಿಯಾಗಿದ್ದಾರೆ.
ಈ ಕಟ್ಟಡ ತಾಲೂಕು ಕಚೇರಿಯನ್ನು ನಾಚಿಸುವಂತಿದೆ. 2015-16ರ ನರೇಗಾ ಯೋಜನೆಯಡಿ ಈ ವ್ಯವಸ್ಥಿತ ಕಟ್ಟಡ ನಿರ್ಮಿಸಿದ್ದಾರೆ. ಗ್ರಾಮಸ್ಥರ ಈ ಕಾರ್ಯಕ್ಕೆ ಅಂದಿನ ಜಿಲ್ಲಾ ಪಂಚಾಯತ್ ಸಿಇಓ ಅನಿರುದ್ಧ ಶ್ರವಣ್ ಸಾಥ್ ನೀಡಿದ್ದಾರೆ. ಕಟ್ಟಡ ನಿರ್ಮಾಣ ಮಾಡಲು 30 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಗ್ರಾಮಮಸ್ಥರೆಲ್ಲರೂ ಪಕ್ಷಬೇಧ ಮರೆತು ಈ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.
Advertisement
Advertisement
ಗ್ರಾಮ ಪಂಚಾಯತ್ ಅಧ್ಯಕ್ಷ ಈ ಕುರಿತು ಮಾತನಾಡಿ, ತಮ್ಮ ಊರಿಗೆ ಸುವ್ಯವಸ್ಥಿತ ಕಾರ್ಯಾಲಯ ನಿರ್ಮಾಣ ಮಾಡಲು ಎಲ್ಲಾ ಗ್ರಾಮಸ್ಥರ ಸಹಕಾರ ನೀಡಿದ್ದಾರೆ. ಅಲ್ಲದೇ ಸರ್ಕಾರದ ನರೇಗಾ ಯೋಜನೆಯನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕೂ ಮುನ್ನ ಕೆರೆಯ ಅಭಿವೃದ್ಧಿ ಹಾಗೂ ಇತರೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾಗಿ ಹೇಳಿದ್ದಾರೆ.
Advertisement
ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಯಾವುದೇ ಪಕ್ಷ ಬೇಧ ಮಾಡುವುದಿಲ್ಲ. ಅಲ್ಲದೇ ಸರ್ಕಾರದ ಅಧಿಕಾರಿಗಳು ಸಹ ಇದಕ್ಕೆ ಸಾಥ್ ನೀಡಿದ್ದಾರೆ. ಕೇವಲ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಮಾಡಲಷ್ಟೇ ಸಿಮೀತವಾಗಿಲ್ಲ. ಒಂದು ಉತ್ತಮ ಕಾರ್ಯ ನಡೆದರೆ ಮತ್ತಷ್ಟೂ ಅನುದಾನ ಪಡೆದು ಗ್ರಾಮದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದು ಗ್ರಾಮಸ್ಥ ವಸಂತ ರಾವ್ ಪಾಟೀಲ್ ಹೇಳಿದ್ದಾರೆ.
Advertisement
https://www.youtube.com/watch?v=Wo19bNxXB7M