ಉಡುಪಿ: ಕಳೆದ ಒಂದು ತಿಂಗಳಿಂದ ಉಡುಪಿಯಲ್ಲಿ ಸೆಲೂನ್‍ಗಳು ಬಂದ್ ಆಗಿರುವುದರಿಂದ ಹೇರ್ ಕಟ್ಟಿಂಗ್, ಶೇವಿಂಗ್ ಮಾಡದೆ ಜನಕ್ಕೆ ಕಿರಿಕಿರಿಯಾಗುತ್ತಿದೆ. ಮನೆಯಲ್ಲಿ ಲಾಕ್ ಆಗಿರೋರು ತಮ್ಮ ಹೇರ್ ಕಟ್ಟಿಂಗ್ ತಾವೇ ಮಾಡಿಕೊಳ್ತಾ ಇದ್ದಾರೆ.
ಹೊರ ಜಿಲ್ಲೆಯಿಂದ ಬಂದು ಉಡುಪಿಯ ನಿರಾಶ್ರಿತರ ಕೇಂದ್ರದಲ್ಲಿ ಇರುವವರು ಕಟ್ಟಿಂಗ್, ಶೇವಿಂಗ್ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಸಂಕಷ್ಟವನ್ನು ಅರಿತುಕೊಂಡ ಉಡುಪಿಯ ಸಮಾಜಸೇವಕ, ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು ಶೇವಿಂಗ್ ಕಿಟ್ ಗಳನ್ನು ಉಚಿತವಾಗಿ ವಿತರಿಸಿದ್ದಾರೆ.
Advertisement
Advertisement
ಉಡುಪಿಯ ಇಂದಿರಾ ಕ್ಯಾಂಟೀನ್, ಬಸ್ ನಿಲ್ದಾಣ, ರಸ್ತೆ ಬಳಿ ಪ್ರತಿನಿತ್ಯ ನೂರಾರು ಮಂದಿ ನಿರ್ಗತಿಕರು ಹೊರ ಜಿಲ್ಲೆಯ ಹೊರ ರಾಜ್ಯದ ಕಾರ್ಮಿಕರು ಇದ್ದಾರೆ. ಅವರಿಗೆಲ್ಲಾ ಶೇವಿಂಗ್ ಕಿಟ್ ಕೊಟ್ಟಿದ್ದಾರೆ. ಊಟ, ತಿಂಡಿಗಂತ ಇಂದಿರಾ ಕ್ಯಾಂಟೀನ್ ಆವರಣಕ್ಕೆ ಬಂದವರಿಗೆ ನಿತ್ಯಾನಂದ ಒಳಕಾಡು ಸೋಪು ಬ್ಲೇಡು ಯೂಸ್ ಆಂಡ್ ಥ್ರೋ ಶೇವಿಂಗ್ ಕಿಟ್ ಮತ್ತು ಬ್ರೆಶ್ ಗಳನ್ನು ಕೊಟ್ಟರು. ಉದ್ದುದ್ದ ಗಡ್ಡ ಮತ್ತು ಕೂದಲು ಬಂದವರನ್ನು ಗುರುತಿಸಿ ಶೇವಿಂಗ್ ಕಿಟ್ಟನ್ನು ವಿತರಣೆ ಮಾಡಿದರು.
Advertisement
Advertisement
ನಾನು ನಾಳೆ ಮತ್ತೆ ಬರುತ್ತೇನೆ ಎಲ್ಲರೂ ನೀಟ್ ಆ್ಯಂಡ್ ಕ್ಲೀನ್ ಆಗಿ ಶೇವ್ ಮಾಡ್ಕೊಂಡು ಬರ್ಬೇಕು ಅಂತ ವಿನಂತಿ ಮಾಡಿಕೊಂಡರು. ಉಡುಪಿ ಟೌನ್ ಟ್ರಾಫಿಕ್ ಎಸ್.ಐ ಅಬ್ದುಲ್ ಖಾದರ್ ಶೇವಿಂಗ್ ಕಿಟ್ ಗಳನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಉದ್ಯಮಿ ರಂಜನ್ ಕಲ್ಕೂರ ನಿತ್ಯಾನಂದ ಒಳಕಾಡು ಅವರನ್ನು ಸನ್ಮಾನಿಸಿದರು. ಮಾತನಾಡಿದ ಎಸ್‍ಐ ಖಾದರ್, ಕಳೆದ ಒಂದು ತಿಂಗಳಿನಿಂದ ಉಡುಪಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ನಿರ್ಗತಿಕರಿಗೆ ನಿರಾಶ್ರಿತರಿಗೆ ಕೂಲಿ ಕಾರ್ಮಿಕರಿಗೆ ಜನರು ಊಟೋಪಚಾರದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಅನ್ನದಾನಕ್ಕಿಂತ ದೊಡ್ಡದಾದ ದಾನ ಬೇರೆ ಇಲ್ಲ. ಹಸಿದವನಿಗೆ ಅನ್ನ ಹಾಕುವುದು ದೇವರು ಮೆಚ್ಚುವ ಕಾರ್ಯ ಎಂದು ಹೇಳಿದರು.
ಸಮಾಜಸೇವಕ ನಿತ್ಯಾನಂದ ಒಳಕಾಡು ಮಾತನಾಡಿ ಕಷ್ಟದಲ್ಲಿರುವವರಿಗೆ ಆಹಾರ ಕೊಡುವುದು ಎಷ್ಟು ಮುಖ್ಯವೋ ಅವರ ಆರೋಗ್ಯವನ್ನು ಕಾಪಾಡುವ ಕೂಡ ಅಷ್ಟೇ ಮುಖ್ಯ. ಜಿಲ್ಲೆಯಲ್ಲಿ ಸೆಲೂನ್ ಬಂದ್ ಆಗಿ ಒಂದು ತಿಂಗಳಾಯ್ತು, ಅವರಾಗಿಯೇ ಶೇವಿಂಗ್ ಕಟ್ಟಿಂಗ್ ಮಾಡಿಕೊಳ್ಳೋಣ ಎಂದರೂ ಅವರಿಗೆ ಬೇಕಾದ ಶೇವಿಂಗ್ ಕಿಟ್ ಗಳ ಸಿಗುತ್ತಿಲ್ಲ. ಹಾಗಾಗಿ ಪಂಚರತ್ನ ಸೇವಾ ಟ್ರಸ್ಟ್ ವತಿಯಿಂದ ಈಗ ನೂರು ಜನರಿಗೆ ಕೆಟ್ ವಿತರಿಸಿದ್ದೇವೆ. ಒಟ್ಟು ಐನೂರು ಜನಕ್ಕೆ ಒಂದೆರಡು ದಿನದಲ್ಲಿ ವಿತರಿಸುತ್ತೇವೆ ಎಂದರು.