ರಾಮನಗರ: ಸಾವಿರಾರು ಸಸಿಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿದ ಸಾಲು ಮರದ ತಿಮ್ಮಕ್ಕನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ತಿಮ್ಮಕ್ಕ ಅವರಿಂದ ಪ್ರೇರಣೆ ಪಡೆದವರಂತೆ ರಾಮನಗರದ ನಿಂಗಣ್ಣ ಅವರು ಸಹ ಸಾಲು ಮರ ನೆಟ್ಟು ಪೋಷಿಸ್ತಿದ್ದಾರೆ.
ರಾಮನಗರ ತಾಲೂಕಿನ ಬಿಳಗುಂಬ ಸಮೀಪದ ಅರೇಹಳ್ಳಿ ಗ್ರಾಮದ ನಿಂಗಣ್ಣ ಸಾಲುಮರಗಳನ್ನು ಬೆಳೆಸಿದ ಪರಿಸರಪ್ರೇಮಿ. ದಿನಗೂಲಿ ನೌಕರರಾಗಿರೋ ನಿಂಗಣ್ಣ ಕಳೆದ 20 ವರ್ಷಗಳಿಂದ ಬಿಳಗುಂಬ-ಅರೇಹಳ್ಳಿ ನಡುವೆ ಸಾಲುಮರಗಳನ್ನ ಬೆಳೆಸಿದ್ದಾರೆ. ಅರಣ್ಯ ಇಲಾಖೆಯಿಂದ ಸಸಿಗಳನ್ನು ತಂದು ಅರೇಹಳ್ಳಿಯ ಬಸವೇಶ್ವರ ದೇವಾಲಯದ ಬಳಿ ಗುಂಡುತೋಪನ್ನೇ ನಿರ್ಮಿಸಿದ್ದಾರೆ. ಪತ್ನಿ-ಮಗನ ಸಹಾಯದಿಂದ ಸಸಿಗಳಿಗೆ ನೀರುಣಿಸಿ ಯಶಸ್ವಿಯಾಗಿದ್ದಾರೆ.
Advertisement
Advertisement
ಪಿತ್ರಾರ್ಜಿತ ಆಸ್ತಿ ಇಲ್ಲದೆ ಭೋಗ್ಯಕ್ಕೆ ಜಮೀನು ಪಡೆದು ಕೃಷಿ ಮಾಡಿದ್ರೂ ನಷ್ಟ ಅನುಭವಿಸಿ ಕೂಲಿ ಮಾಡುವಂತಾಯ್ತು. ಈ ವೇಳೆ, ಪರಿಸರ ಕಾಳಜಿ ಮೂಡಿದ್ದೇ ತಡ ಅರಣ್ಯ ಇಲಾಖೆಯಿಂದ ಸಸಿಗಳನ್ನು ತಂದು 950 ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಅಲ್ಲದೆ ಚನ್ನಪಟ್ಟಣದ ಕಣ್ವಾ ಬಡಾವಣೆಯ ಉದ್ಯಾನವನ, ಮಳವಳ್ಳಿ ಸೇರಿದಂತೆ ಹಲವು ಕಡೆ ಸಸಿಗಳನ್ನೂ ನೆಟ್ಟು ಪೋಷಣೆ ಮಾಡ್ತಿದ್ದಾರೆ ಎಂದು ಗ್ರಾಮಸ್ಥ ರವಿರಾಜ್ ಹೇಳಿದ್ದಾರೆ.
Advertisement
ಒಟ್ಟಾರೆ ಸಾಲುಮರದ ತಿಮ್ಮಕ್ಕನಂತೆ ನಿಂಗಣ್ಣ ಕೂಡ ಸಾಲುಮರಗಳನ್ನು ನೆಟ್ಟು ಪೋಷಿಸುತ್ತಾ ಪರಿಸರ ಕಾಳಜಿ ತೋರುತ್ತಿರುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv