ಶಿವಮೊಗ್ಗ: ಊರ ಹೊರವಲಯದಲ್ಲಿ ಒಂದು ಎಕರೆ ಭೂಮಿ ಇದ್ದರೆ ಅದನ್ನು ಸೈಟುಗಳನ್ನಾಗಿ ಪರಿವರ್ತಿಸಿ, ಕೋಟಿಗಟ್ಟಲೆ ಹಣ ಎಣಿಸುವ ಜನರ ಹೆಚ್ಚಾಗಿರುವ ಈ ಕಾಲದಲ್ಲಿ ಅದೇ ಒಂದು ಎಕರೆ ಭೂಮಿಯಲ್ಲಿ ವೈವಿಧ್ಯ ಮರ-ಗಿಡಗಳ ಕಾಡು ಬೆಳೆಸಲು ಮುಂದಾಗಿರುವ ವ್ಯಕ್ತಿಯೇ ಇವತ್ತಿನ ಪಬ್ಲಿಕ್ ಹೀರೋ.
ಶಿವಮೊಗ್ಗದ ನವ್ಯಶ್ರೀ ನಾಗೇಶ್ ಎಂಬವರು ವೃತ್ತಿಯಲ್ಲಿ ಕೇಟರರ್. ರಾಜ್ಯ ಹೆದ್ದಾರಿ 57ರ ಸಮೀಪವೇ ಇರೋ ಒಂದು ಎಕರೆ ಭೂಮಿಯಲ್ಲಿ ಪ್ರಾಣಿಗಳಿಗಾಗಿಯೇ 300ಕ್ಕೂ ಹೆಚ್ಚು ಹಣ್ಣು-ಹಂಪಲುಗಳ ಸಸಿಗಳನ್ನು ನೆಟ್ಟಿದ್ದಾರೆ. ಇದಕ್ಕೆ ಈಶ್ವರ ವನ ಎಂದು ನಾಮಕರಣ ಕೂಡ ಮಾಡಿದ್ದಾರೆ. ದೇವರು ನಮಗೆ ಸಾಕಷ್ಟು ಕೊಟ್ಟಿದ್ದಾನೆ. ನಮಗೆ ಹೆಚ್ಚಾಗಿರೋದನ್ನು ಪ್ರಾಣಿ ಪಕ್ಷಿಗಳಿಗೆ ಮೀಸಲು ಇಟ್ಟಿದ್ದೇವೆ ಅಂತ ನಾಗೇಶ್ ಹೇಳುತ್ತಾರೆ.
Advertisement
ಈಶ್ವರ ವನದಲ್ಲಿ ಶಿವನ ದೇಗುಲವೂ ಇದೆ. ಇಲ್ಲಿ ಅರ್ಚಕರು ಇಲ್ಲ, ಹುಂಡಿಯೂ ಇಲ್ಲ. ಇಲ್ಲಿಗೆ ಬಂದವರು ಸ್ವತಃ ಪೂಜೆ ಮಾಡಬಹುದು. ಇಲ್ಲಿನ ಮರ-ಗಿಡಗಳಿಗೆ ರಕ್ಷಣೆ ಸಿಗಲಿ. ಬಂದವರಿಗೆ ಆಧ್ಯಾತ್ಮಿಕ ಅನುಭವ ಸಿಗಲಿ ಎಂಬ ಕಾರಣದಿಂದ ಈ ದೇಗುಲ ಕಟ್ಟಿದ್ದಾರೆ.
Advertisement
ಈಶ್ವರ ವನದಲ್ಲಿನ ಈ ಸಸಿಗಳು ನಾಲ್ಕೈದು ವರ್ಷಕ್ಕೆ ಮರಗಳಾಗಿ ಹಣ್ಣು ಬಿಡಲು ಆರಂಭಿಸುತ್ತವೆ. ಆಗ ನಾನಾ ಜಾತಿಯ ಪಕ್ಷಿಗಳು ಈ ಜಾಗದಲ್ಲಿ ಆಶ್ರಯ ಪಡೆಯುತ್ತವೆ. ಅವುಗಳ ಕಲರವ ಕೇಳಲು ನಾಗೇಶ್ ಕಾತರರಾಗಿದ್ದಾರೆ.
Advertisement
https://www.youtube.com/watch?v=w6ykCPkpkYw