ತುಮಕೂರು: ಸಮಾಜ ಎಷ್ಟು ಮುಂದುವರಿತಿದ್ಯೋ ಮೂಢನಂಬಿಕೆಯೂ ಅಷ್ಟೇ ಗಾಢವಾಗ್ತಿದೆ. ಬುಡುಬುಡುಕೆ ಶಾಸ್ತ್ರ, ಗಿಣಿ ಶಾಸ್ತ್ರಗಳ ಹೆಸರನ್ನು ಹೇಳಿ ಜನರನ್ನು ವಂಚಿಸುತ್ತಿರುವ ಕಳ್ಳರ ಬಗ್ಗೆ ತುಮಕೂರಿನ ವ್ಯಕ್ತಿಯೊಬ್ಬರು ಜಾಗೃತಿ ಮೂಡಿಸುತ್ತಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಿಲ್ಲಾರ್ಲಹಳ್ಳಿ ನಿವಾಸಿಯಾಗಿರೋ ನವೀನ್ ಗಿಣಿಶಾಸ್ತ್ರ, ಬುಡುಬುಡುಕೆ ಶಾಸ್ತ್ರದ ಮೋಸದ ಜಾಲದ ಬಗ್ಗೆ ಅರಿವು ಮೂಡಿಸ್ತಿದ್ದಾರೆ. ಸ್ವತಃ ತಾನೇ ಬುಡುಬುಡುಕೆ, ಗಿಣಿಶಾಸ್ತ್ರ, ಸ್ವಾಮೀಜಿ ರೀತಿ ವೇಷ ಧರಿಸಿ ಊರೂರು ಸುತ್ತಿ ಮಂಕುಬೂದಿ ಎರಚೋವರ ಅಸಲಿಯತ್ತು ಬಯಲು ಮಾಡುತ್ತಿದ್ದಾರೆ ಅಂತ ಗ್ರಾಮಸ್ಥರಾದ ಧನಂಜಯ್ ತಿಳಿಸಿದ್ದಾರೆ.
2006ರಲ್ಲಿ ನವೀನ್ ತಂದೆ ಅನಾರೋಗ್ಯಕ್ಕೀಡಾಗಿದ್ದ ಬುಡುಬುಡುಕೆಯವರ ಮಾತು ಕೇಳಿ ಸಾವಿರಾರು ರೂಪಾಯಿ ಕಳೆದುಕೊಂಡಿದ್ದರಂತೆ. ಅಂದಿನಿಂದಲೇ ಈ ಬಗ್ಗೆ ನವೀನ್ ಜಾಗೃತಿ ಮೂಡಿಸ್ತಿದ್ದಾರೆ.
ಕಾರ್ಯಕ್ರಮ ನಿರೂಪಕರಾಗಿರೋ ನವೀನ್, ತಿಂಗಳಲ್ಲಿ 5-6 ದಿನದಂತೆ 10 ವರ್ಷಗಳಿಂದ ತುಮಕೂರು, ಪಾವಗಡ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಫಲಾಪೇಕ್ಷೆ ಇಲ್ಲದೆ ಜಾಗೃತಿ ಮೂಡಿಸ್ತಿದ್ದಾರೆ.
https://www.youtube.com/watch?v=jxPNhTg1vMw
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv