ಬಳ್ಳಾರಿ: ಕಂಪೆನಿಯಲ್ಲಿ ಲಕ್ಷ ಲಕ್ಷ ಸಂಬಳ ಸಿಗ್ತಿದ್ರೂ ಕೆಲಸ ಬಿಟ್ಟು ಕೃಷಿಕರಾದವರು ನಮ್ಮ ಪಬ್ಲಿಕ್ ಹೀರೋ. ಕೃಷಿ ಅಂದಾಗ ತೆಗಳಿದ್ದ ಸ್ನೇಹಿತರು ಸಂಬಂಧಿಕರು, ಈಗ ಹೊಗಳ್ತಿದ್ದಾರೆ.
Advertisement
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪ್‍ನ ನಿವಾಸಿ ನವೀನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. 2010ರಲ್ಲಿ ಬಳ್ಳಾರಿಯ ಬಿಐಟಿಎಂ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿ, ಹೈದ್ರಾಬಾದ್‍ನ ಸಾಫ್ಟ್ ವೇರ್ ಕಂಪೆನಿಯಲ್ಲಿ 40 ಸಾವಿರ ರೂಪಾಯಿ ಸಂಬಳದ ಒಳ್ಳೆಯ ಕೆಲಸವನ್ನು ಮಾಡ್ತಿದ್ದರು. ಕೆಲಸಕ್ಕೆ ಹೋದ ಕೆಲವೇ ದಿನಗಳಲ್ಲಿ ಅದ್ಯಾಕೋ ಕೃಷಿ ಇವರನ್ನ ಕೈಬೀಸಿ ಕರೀತು. ಕೆಲಸ ಬಿಟ್ಟು ಮಣ್ಣನ್ನ ಕಣ್ಣಿಗೊತ್ತಿಕೊಂಡು ಹತ್ತು ಎಕರೆ ಸ್ವಂತ ಜಮೀನಿನಲ್ಲಿ ಹೆಬ್ಬೇವು ಬೆಳೆದಿದ್ದಾರೆ.
Advertisement
Advertisement
ಹೆಬ್ಬೇವು ಗಿಡಗಳನ್ನ ಕಾರ್ಡ್‍ಬೋರ್ಡ್ ತಯಾರಿಕೆಗೆ ಬಳಸ್ತಾರೆ. 6 ರಿಂದ 8 ವರ್ಷ ಆರೈಕೆ ಮಾಡಿದ್ರೆ ಲಕ್ಷ ಲಕ್ಷ ರುಪಾಯಿ ಆದಾಯ ನಿಶ್ಚಿತ. ಹೀಗಾಗಿ ನವೀನ್ 10 ಅಡಿಗಳ ಅಂತರದಲ್ಲಿ ಹನಿ ನೀರಾವರಿ ಮೂಲಕ 4 ಸಾವಿರ ಹೆಬ್ಬೇವು ಗಿಡಗಳನ್ನು ಬೆಳೆಸಿದ್ದಾರೆ. ಹೆಬ್ಬೇವು ಗಿಡಗಳ ಮಧ್ಯೆ ಕಡಲೆ, ಅಜವಾನ್ ಸೇರಿದಂತೆ ದ್ವಿದಳ ಧಾನ್ಯಗಳನ್ನು ಬೆಳೆದು ಬದುಕು ಸಾಗಿಸ್ತಿದ್ದಾರೆ. ನವೀನ್ ಕೃಷಿ ಮಾಡ್ತೀನಿ ಅಂದಾಗ ತೆಗಳಿದ್ದ ಸ್ನೇಹಿತರು, ಕುಟುಂಬದವರು ಇಂದು ಹಾಡಿ ಹೊಗಳುತ್ತಿದ್ದಾರೆ.
Advertisement
https://www.youtube.com/watch?v=vkC9Wv-pvxM