Connect with us

Chitradurga

KSRTC ಅಲ್ಲ, ಇದು ಕನ್ನಡ ರಥ- ಬಸ್‍ನಲ್ಲೇ ಸಂಚಾರಿ ಗ್ರಂಥಾಲಯ ತೆರೆದ ಚಿತ್ರದುರ್ಗದ ಚಾಲಕ ನಟರಾಜ್

Published

on

ಚಿತ್ರದುರ್ಗ: ಆಧುನಿಕ ಕಾಲದಲ್ಲಿ ಮೊಬೈಲ್, ಇಂಟರ್ನೆಟ್ ಅಂತ ಬಂದು ಪುಸ್ತಕ ಓದುವವರ ಸಂಖ್ಯೆ ಕ್ಷೀಣವಾಗಿದೆ. ಆದ್ರೆ ಚಿತ್ರದುರ್ಗದಲ್ಲಿ ನಟರಾಜ್ ಅನ್ನೋವ್ರು ತಾವು ಡ್ರೈವರ್ ಆಗಿರೋ KSRTC ಬಸ್‍ನಲ್ಲೇ ಗ್ರಂಥಾಲಯ ತೆರೆದಿದ್ದಾರೆ. ಇದರ ಜೊತೆಗೆ ಹಲವು ಜನೋಪಕಾರಿ ಕಾರ್ಯ ಮಾಡ್ತಿದ್ದಾರೆ.

KSRTC ಬಸ್ ಒಳಗೆ ಮೊಬೈಲ್ ಗ್ರಂಥಾಲಯ. ಡ್ರೈವರ್ ನಟರಾಜ್ ಆಸಕ್ತಿಯಿಂದ ಬಸ್‍ನಲ್ಲೇ ಸಂಚಾರಿ ಗ್ರಂಥಾಲಯ ತೆರೆದಿದ್ದಾರೆ. ಇದಕ್ಕೆ ಮಾತೃಭೂಮಿ ಅಂತ ಹೆಸರಿಟ್ಟಿದ್ದು ಪ್ರಯಾಣಿಕರಿಗೆ ಕನ್ನಡ ಪುಸ್ತಕ, ದಿನಪತ್ರಿಕೆ ಹಾಗು ವಾರಪತ್ರಿಕೆಗಳನ್ನ ಓದುವಂತಹ ಅವಕಾಶ ಕಲ್ಪಿಸಿದ್ದಾರೆ. ಅಲ್ಲದೆ ಸ್ವಪ್ರೇರಣೆಯಿಂದ ಸುಮಾರು 31 ಬಾರಿ ರಕ್ತದಾನ ಮಾಡಿದ್ದಾರೆ. ಜೊತೆಗೆ, ಬಸ್‍ನಲ್ಲೇ ಎರಡು ಸಾವಿರಕ್ಕೂ ಅಧಿಕ ರಕ್ತದಾನಿಗಳ ವಿಳಾಸ, ಮಾಹಿತಿ ನೇರವಾಗಿ ಓದುಗರ ಕೈಗೆ ಸಿಗುವಂತೆ ಮಾಡಿದ್ದಾರೆ.

ಬಸ್ಸನ್ನ ಒಂದು ಸುತ್ತು ಹಾಕಿದರೆ ಸಾಕು. ರಾಜ್ಯದ ಇಡೀ ಇತಿಹಾಸವನ್ನ ಓದಿದಷ್ಟು ಅನುಭವವಾಗತ್ತೆ. ಇನ್ನು ರಾಷ್ಟ್ರೀಯ, ನಾಡ ಹಬ್ಬಗಳು, ಜಯಂತಿಗಳನ್ನ ತಪ್ಪದೆ ಕಳೆದ 10 ವರ್ಷಗಳಿಂದ ಆಚರಿಸಿಕೊಂಡು ಬರ್ತಿದ್ದಾರೆ. ನಟರಾಜ್ ಕಾರ್ಯ ಶ್ಲಾಘನೀಯ ಅಂತ ಜನ ಕೊಂಡಾಡ್ತಿದ್ದಾರೆ.

ಒಟ್ಟಾರೆ ನಟರಾಜ್ ಅವರ ಕನ್ನಡಾಭಿಮಾನಿ ಎಲ್ಲರ ಗಮನ ಸೆಳೆದಿದೆ.

https://www.youtube.com/watch?v=UGPwUNodlgg

Click to comment

Leave a Reply

Your email address will not be published. Required fields are marked *