-ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಬೋಧನೆ
ಧಾರವಾಡ/ಹುಬ್ಬಳ್ಳಿ: ಸೇನೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂದು ಅದೆಷ್ಟೋ ಜನರು ಕನಸು ಕಾಣುತ್ತಾರೆ. ಆದ್ರೆ ಎಲ್ಲರಿಗೂ ಆ ಅದೃಷ್ಟ ಸಿಗಲ್ಲ. ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹುಬ್ಬಳ್ಳಿಯ ನಿವೃತ್ತ ಯೋಧ ನಾಗರಾಜ್ ಅವರು ಶಾಲೆಯಲ್ಲಿ ಸೇನಾ ತರಬೇತಿ ನೀಡುತ್ತಿದ್ದಾರೆ.
ಧಾರವಾಡದ ಕುಂದಗೋಳದ ನಿವಾಸಿ ನಾಗರಾಜ್ ಗವಳಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ನಾಗರಾಜ್ ವಿದ್ಯಾರ್ಥಿಗಳಿಗೆ ಸೇನಾ ಕಸರತ್ತು ಹೇಳಿಕೊಡುತ್ತಿದ್ದಾರೆ. 1999ರಲ್ಲಿ ಕಾರ್ಗಿಲ್ ವಶ ಪಡಿಸಿಕೊಂಡಿದ್ದ ಪಾಕಿಸ್ತಾನವನ್ನು ಸದೆಬಡಿದ ಆಪರೇಷನ್ ಪರಾಕ್ರಮ ಮತ್ತು ಆಪರೇಷನ್ ವಿಜಯ್ ಎರಡರಲ್ಲೂ ಭಾಗಿಯಾಗಿದ್ದ ಧೀರ ಯೋಧ. 2010ರಲ್ಲಿ ಹವಾಲ್ದಾರ್ ವೃತ್ತಿಯಿಂದ ನಿವೃತ್ತರಾಗಿರೋ ನಾಗರಾಜ್, ಕುಂದಗೋಳದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Advertisement
ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಸೆಲ್ಫ್ ಡಿಫೆನ್ಸ್ ತರಬೇತಿ ನೀಡುತ್ತಿದ್ದಾರೆ. 5 ವರ್ಷದಿಂದ ಜಿಲ್ಲೆಯ ಕೆಲ ಕಾಲೇಜ್‍ಗಳಲ್ಲಿ ಉಚಿತ ಸೈನಿಕ ತರಬೇತಿಯನ್ನೂ ಕೊಡುತ್ತಿದ್ದಾರೆ. ದೇಶವನ್ನು ಕಾಯೋ ಹೆಗ್ಗಳಿಕೆ, ಅಲ್ಲಿನ ಕಷ್ಟ ಸ್ಥಿತಿಯನ್ನೂ ಮಕ್ಕಳಿಗೆ ನಾಗರಾಜ್ ಮನವರಿಕೆ ಮಾಡಿಕೊಡುತ್ತಿದ್ದಾರೆ.
Advertisement
https://www.youtube.com/watch?v=bzVl6Whz15o
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv