ಯಾದಗಿರಿ: ಹುಟ್ಟಿದ ಊರಿನ ಬಗ್ಗೆ ಜನತೆಗೆ ಉದಾಸೀನ ಇರೋತ್ತೆ ಅನ್ನೋದು ಟೀಕೆ. ಆದ್ರೆ, ಯಾದಗಿರಿಯ ಬೆಳಗೇರಾ ಗ್ರಾಮಸ್ಥರು ಒಗ್ಗೂಡಿ ದೇಣಿಗೆ ಸಂಗ್ರಹಿಸಿ ಭವ್ಯವಾದ ದೇವಸ್ಥಾನ ನಿರ್ಮಿಸಿದ್ದಾರೆ.
ಹೌದು. ಯಾದಗಿರಿ ತಾಲೂಕಿನ ಬೆಳಗೇರಾ ಗ್ರಾಮದಲ್ಲಿ 25 ವರ್ಷಗಳ ಹಿಂದೆ ಜಾತಿ ಭೇದವಿಲ್ಲದೆ, ಎಲ್ಲರೂ ಸೇರಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು. ಆಗ 20 ಸಾವಿರ ದೇಣಿಗೆಯನ್ನೂ ಸಂಗ್ರಹಿಸಿದ್ದರು. ಆದ್ರೆ, ದೇಣಿಗೆ ಹಣ ಕಡಿಮೆಯಾದ ಕಾರಣ ಲಕ್ಷ್ಮಿ ದೇವಸ್ಥಾನ ನಿರ್ಮಾಣ ಕೈಬಿಡಬೇಕಾಯಿತು. ಬಳಿಕ ಆ ಹಣವನ್ನು 25 ವರ್ಷಗಳ ಕಾಲ ಸಾಲ ನೀಡಿ, ಈಗ ಅದರ ಮೊತ್ತ ಬರೋಬ್ಬರಿ 1 ಕೋಟಿ ರೂಪಾಯಿ ಆಗಿದೆ. ಆ ಹಣದಲ್ಲಿ ಭವ್ಯವಾದ ಲಕ್ಷ್ಮಿ ದೇವಸ್ಥಾನ ನಿರ್ಮಿಸಿ ಸುತ್ತಲೂ 4 ಎಕರೆ ಜಮೀನು ಖರೀದಿಸಿರುವುದಾಗಿ ಅರ್ಚಕ ದೇವಿಂದ್ರ ಹೇಳಿದ್ದಾರೆ.
Advertisement
Advertisement
ಅಂದಹಾಗೆ, ಇವರು ಹಣವನ್ನು ಬ್ಯಾಂಕ್‍ನಲ್ಲಿ ಜಮೆ ಮಾಡಿಲ್ಲ. ಬದಲಿಗೆ ಊರಿನ ರೈತರಿಗೆ ಸಾಲ ನೀಡಿದ್ದಾರೆ. ಲಕ್ಷ್ಮಿ ದೇವಿಯ ಹಣ ಪಡೆದರೆ ಒಳಿತಾಗುತ್ತೆ ಎಂದು ರೈತರು ಸಾಲ ಪಡೀತಿದ್ರು. ಅದರಂತೆ ಅವರಿಗೆ ಒಳಿತೂ ಆಗುತ್ತಿತ್ತು. ಸಾಲದ ಹಣವನ್ನು ಪ್ರತಿವರ್ಷದ ಎಳ್ಳಮಾವಾಸ್ಯೆಯಂದು ಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ರೈತರು ಹಿಂತಿರುಗಿಸುತ್ತಾ ಬಂದಿದ್ದಾರೆ ಎಂದು ಗ್ರಾಮಸ್ಥ ಹಣಮಂತ ತಿಳಿಸಿದ್ದಾರೆ.
Advertisement
ಪ್ರತಿ 3 ವರ್ಷಕ್ಕೊಮ್ಮೆ ಈ ಗ್ರಾಮದಲ್ಲಿ ಜಾತ್ರೆಯೂ ನಡೀತಿದೆ. ಈ ಮೂಲಕ, ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದನ್ನು ಬೆಳಗೇರಾ ಗ್ರಾಮಸ್ಥರು ತೋರಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv