ಪತ್ನಿಗಾದ ಸಮಸ್ಯೆ ಯಾರಿಗೂ ಆಗಬಾರದೆಂದು ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡ್ತಿರೋ ಬೆಳಗಾವಿಯ ಮಲ್ಲಯ್ಯ

Public TV
1 Min Read
PUBLIC HERO 3

-ದಿನದ 24 ಗಂಟೆಯೂ ಸಿಗ್ತಾರೆ ಜೀವರಕ್ಷಕ

ಬೆಳಗಾವಿ: ಎಲ್ಲದರಲ್ಲೂ ಹಣ ಗಳಿಕೆಯನ್ನು ನೋಡೋ ಜನರೇ ಹೆಚ್ಚು. ಇಂತಹವರ ನಡುವೆ ತಮ್ಮ ಶಕ್ತಿಗೆ ಅನುಸಾರ ಸಮಾಜ ಸೇವೆ ಮಾಡೋವ್ರು ಇದ್ದಾರೆ. ಇವತ್ತಿನ ನಮ್ಮ ಪಬ್ಲಿಕ್ ಹೀರೋ ಗರ್ಭಿಣಿಯರಿಗೆ ಉಚಿತವಾಗಿ ಆಟೋಸೇವೆ ಒದಗಿಸ್ತಿದ್ದಾರೆ.

PUBLIC HERO 1

ಬೆಳಗಾವಿಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ನಿವಾಸಿಯಾದ ಆಟೋ ಚಾಲಕ ಮಲ್ಲಯ್ಯ ಹಿರೇಮಠ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ತಮ್ಮ ಸ್ವಗ್ರಾಮ ಯಮಕನಮರಡಿ ಸೇರಿದಂತೆ ಸುತ್ತಮುತ್ತಲಿನ ಗರ್ಭಿಣಿಯರನ್ನ ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯುತ್ತಾರೆ. ಹೆರಿಗೆ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿ ಕರೆದರೂ ಸಹ ಹಾಜರಾಗ್ತಾರೆ. ಆಸ್ಪತ್ರೆಗೆ ದಾಖಲಿಸಿ ವೈದ್ಯರಿಂದ ಮಾಹಿತಿ ಪಡೆದ ನಂತರವೇ ಅಲ್ಲಿಂದ ಹೊರಡುತ್ತಾರೆ. ಒಂದು ವೇಳೆ ದೊಡ್ಡ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದರೆ ಬೇರೆ ನಗರಕ್ಕೆ ಹೋಗಲು ಅಂಬ್ಯುಲೆನ್ಸ್ ಅಥವಾ ಬೇರೆ ವಾಹನ ಕಲ್ಪಿಸಿಕೊಡ್ತಾರೆ.

PUBLIC HERO 2

ಹೀಗೆ 140ಕ್ಕೂ ಹೆಚ್ಚು ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ಒದಗಿಸಿರುವ ಹಿರೇಮಠ್ ಅವ್ರು ರಿಜಿಸ್ಟರ್ ಬುಕ್‍ನಲ್ಲಿ ಬರೆದಿಟ್ಟುಕೊಂಡಿದ್ದಾರೆ. ಯಾಕೆ ನೀವು ಉಚಿತ ಸೇವೆ ನೀಡ್ತಿದ್ದೀರಿ ಅಂದ್ರೆ ನನ್ನ ಪತ್ನಿಗಾದ ಸಮಸ್ಯೆ ಯಾರಿಗೂ ಆಗಬಾರದು ಎಂದು ಹೇಳ್ತಾರೆ.

ತಮ್ಮ ಇಂತಹ ನಿಸ್ವಾರ್ಥ ಸೇವೆಯಿಂದ ಗ್ರಾಮೀಣ ಪ್ರದೇಶದಲ್ಲಿ ಮಲ್ಲಯ ಹಿರೇಮಠ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

https://www.youtube.com/watch?v=9nYoG0_M4e0

 

Share This Article
Leave a Comment

Leave a Reply

Your email address will not be published. Required fields are marked *