ಧಾರವಾಡ: ಭೀಕರ ಬರಗಾಲದಿಂದ ವಿದ್ಯಾಕಾಶಿ ಧಾರವಾಡ ಜಿಲ್ಲೆಯೂ ಹೊರತಾಗಿಲ್ಲ. ಇಂಥ ಬರದ ಪರಿಸ್ಥಿತಿಯ ನಡುವೆಯೂ ಕಳೆದ ಮೂರು ವರ್ಷದಿಂದ ಪ್ರಾಣಿಗಳಿಗೆ ನೀರುಣಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ ಈ ನಮ್ಮ ಪಬ್ಲಿಕ್ ಹೀರೋ.
Advertisement
ಧಾರವಾಡ ತಾಲೂಕಿನ ಲಾಳಗಟ್ಟಿ ಗ್ರಾಮ ಚಿಕ ರೈತ ಮದಾರಸಾಬ ಅಗಸಿಮನಿ ಬೋರ್‍ವೆಲ್ ಮೂಲಕ ಕಾಡುಪ್ರಾಣಿಗಳಿಗೆ ನೀರುಣಿಸ್ತಿದ್ದಾರೆ. ತೋಟದ ಪಕ್ಕದ ಅರಣ್ಯದಲ್ಲಿ ಇಲಾಖೆ ನಿರ್ಮಿಸಿರೋ ಚಿಕ್ಕ ಕೆರೆ ಬತ್ತಿ ಹೋಗಿತ್ತು. ಒಂದು ದಿನ ತೋಟದ ಪೈಪ್‍ಗೆ ಜಿಂಕೆಗಳು ಬಾಯಿ ಹಾಕಿ ನೀರಿನ ಹನಿಗಳನ್ನ ಕುಡಿಯುತ್ತಿದ್ದವಂತೆ. ಈ ಮನಕಲಕುವ ದೃಶ್ಯ ನೋಡಿದ ಮದಾರಸಾಬ ಅಂದಿನಿಂದಲೇ ಬತ್ತಿ ಹೋಗಿದ್ದ ಕೆರೆಗೆ ನೀರು ತುಂಬಿಸ್ತಿದ್ದಾರೆ.
Advertisement
Advertisement
ನೀರಿಲ್ಲದೇ ಗ್ರಾಮಕ್ಕೆ ಬಂದಾಗ ನಾಯಿ ದಾಳಿಗೆ ಅದೆಷ್ಟೋ ಪ್ರಾಣಿಗಳು ಬಲಿಯಾಗಿವೆ. ಹಗಲು ಜನ ಓಡಾಡೋ ಕಾರಣ ಕತ್ತಲೆ ಕವಿದಂತೆ ಜಿಂಕೆ, ಸಾರಂಗ, ಕಾಡು ಹಂದಿ, ನವಿಲು ಸೇರಿದಂತೆ ಹಲವು ಪ್ರಾಣಿಗಳು ನೀರಿನ ದಾಹ ನೀಗಿಸಿಕೊಳ್ಳುತ್ತಿವೆ. ಇದೀಗ ಮದಾರಸಾಬ ಅವರ ಈ ಕೆಲಸವನ್ನ ಗ್ರಾಮಸ್ಥರು ಶ್ಲಾಘಿಸುತ್ತಾರೆ.
Advertisement
ಇಂತಹ ಬಿರುಬೇಸಿಗೆಯಲ್ಲೂ ನೀರುಣಿಸ್ತಿರೋ ಮದಾರಸಾಬ ಅವ್ರಿಗೆ ವನ್ಯಜೀವಿಗಳಿಗೆ ಧನ್ಯತಾಭಾವ ತೋರಿಸುತ್ತಿವೆ. ಬೇಸಿಗೆಯಲ್ಲಿ ನೀರಿಗಾಗಿ ಕಷ್ಟಪಡುತ್ತಿರುವ ಕಾಡುಪ್ರಾಣಿಗಳಿಗೆ ನೀರುಣಿಸುವ ಮೂಲಕ ಮದಾರಸಾಬ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದು, ಇವರ ಸೇವೆ ಹೀಗೆ ನಿರಂತರವಾಗಿ ನಡೆಯಲಿ ಎಂಬುವುದೇ ನಮ್ಮ ಆಶಯ.