ಬಳ್ಳಾರಿ: ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ನಲ್ಲಿ ಪ್ರಸಾರ ಮಾಡುವ ಪಬ್ಲಿಕ್ ಹೀರೋ ಒಬ್ಬರು ಇದೀಗ ಚುನಾವಣೆಯ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚು ಮಾಡಲು ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ರಾಯಭಾರಿಯನ್ನಾಗಿ ಮಾಡಿರುವಂತೆ ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಇದೀಗ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡಮುಣುಗು ಗ್ರಾಮದ ಎರಡು ಕೈಗಳಿಲ್ಲದ ದಿವ್ಯಾಂಗದ ಅತಿಥಿ ಶಿಕ್ಷಕಿ ಎನ್. ಲಕ್ಷ್ಮೀದೇವಿ ಅವರನ್ನು ಚುನಾವಣಾ ಆಯೋಗ ರಾಯಭಾರಿಯನ್ನಾಗಿ ಮಾಡಿದೆ.
Advertisement
ಲಕ್ಷ್ಮೀದೇವಿ ಇಂದು ತಮಗೆ ಎರಡು ಕೈಗಳಿಲ್ಲದಿದ್ದರೂ ಯಾರ ಸಹಾಯವಿಲ್ಲದೆ ತಮ್ಮ ಕಾಲಿನಿಂದಲೇ ಓಟು ಮಾಡುವ ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರು.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀದೇವಿ, ನಾನು ಕಳೆದ ಎಂಟು ವರ್ಷಗಳಿಂದ ಕಾಲಿನಿಂದಲೇ ಮತದಾನ ಮಾಡುತ್ತಿದ್ದೇನೆ. ಇದು ನನಗೆ ಸಂತಸ ತಂದಿದೆ. ನನ್ನ ಮತದಾನದ ಹಕ್ಕನ್ನು ನಾನು ಚಲಾಯಿಸುತ್ತಿದ್ದು, ಎಲ್ಲಾ ವಿಶೇಷ ಚೇತನರೂ ಇದೇ ರೀತಿ ಯಾರ ಸಹಾಯವಿಲ್ಲದೆ ಮತಗಟ್ಟೆಗೆ ಬಂದು ಮತದಾನ ಮಾಡಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ ಎಂದರು.
Advertisement
https://www.youtube.com/watch?v=alu2Mb7d-AI&feature=youtu.be