ಕೋಲಾರ: ತೆಲುಗು ಪ್ರಭಾವವೇ ಹೆಚ್ಚಿರುವ ಕೋಲಾರದ ಗಡಿ ಶ್ರೀನಿವಾಸಪುರದ ಕಿರಣ್ ಕನ್ನಡದ ಕಂಪು ಪಸರಿಸ್ತಿದ್ದಾರೆ.
ಸಣ್ಣದೊಂದು ಕೊಠಡಿಯಲ್ಲಿಯೇ ಹೋರಾಟಗಾರರು, ಜ್ಞಾನಪೀಠ ಪುರಸ್ಕೃತರು, ಸಂತರು, ದಾರ್ಶನಿಕರು, ಸಮಾಜ ಸುಧಾರಕರ ಫೋಟೊಗಳಿಗೆ ಪೂಜೆ ಸಲ್ಲಿಸುತ್ತಿರುವ ಕಿರಣ್, ಕೋಲಾರದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗಡಿ ಸೋಮಯಾಜಲಹಳ್ಳಿಯಲ್ಲಿ ಇಂದಿಗೂ ತೆಲುಗಿನ ಪ್ರಭಾವವೇ ಹೆಚ್ಚು. ಇದರ ನಡುವೆಯೂ ಕಿರಣ್ ಮಾತ್ರ ಕನ್ನಡವನ್ನೇ ಪಸರಿಸ್ತಿದ್ದಾರೆ.
Advertisement
ಸರ್ಕಾರದ ಸಣ್ಣ ಕಟ್ಟಡದ ಆಶ್ರಯ ಪಡೆದುಕೊಂಡಿರುವ ಕಿರಣ್, ಮನೆಯವರ ಆಸರೆ ಇಲ್ಲದೆ ವಿದ್ಯಾರ್ಥಿ ವೇತನದಲ್ಲೇ ಓದ್ತಿದ್ದಾರೆ. ಕಿರಣ್ ಹವ್ಯಾಸ ಮತ್ತು ಕನ್ನಡಾಭಿಮಾನವನ್ನ ಕಂಡ ಸ್ಥಳೀಯರು ಬೆಂಬಲಕ್ಕೆ ನಿಂತಿದ್ದಾರೆ.
Advertisement
ಒಟ್ಟಿನಲ್ಲಿ, ಯುವ ಪೀಳಿಗೆಯಂತೆ ಮೊಬೈಲ್ ಮೇನಿಯಾದಲ್ಲಿ ಮುಳುಗಿಹೋಗದ ಕಿರಣ್ ಎಲ್ಲರ ಗಮನ ಸೆಳೆದಿದ್ದಾರೆ.