Wednesday, 18th July 2018

13 ವರ್ಷಗಳಲ್ಲಿ 1 ಲಕ್ಷ ಗಿಡನೆಟ್ಟ ಪರಿಸರ ಪ್ರೇಮಿ-ಜೀತ್ ಮಿಲನ್ ನಮ್ಮ ಪಬ್ಲಿಕ್ ಹೀರೋ

ಮಂಗಳೂರು: ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ವಲ್ಪ ಡಿಫೆರೆಂಟ್ ಕಾಕ್‍ಟೈಲ್ ಪಾರ್ಟಿ ಆಯೋಜನೆ ಮಾಡುವ ಇವರು ಸದಿಲ್ಲದೇ ಹಸಿರು ಕ್ರಾಂತಿಯನ್ನು ಮಾಡುತ್ತಿದ್ದಾರೆ.

ಮಂಗಳೂರಿನ ಮೋರ್ಗನ್ಸ್ ಗೇಟ್ ನಿವಾಸಿ ಜೀತ್ ಮಿಲನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಸ್ಮಶಾನದಲ್ಲಿ ಗಿಡ ನೆಟ್ಟರೆ ಯಾರೂ ಅಡ್ಡಿ ಮಾಡಲ್ಲ. ಗಿಡಗಳೂ ಚೆನ್ನಾಗಿ ಬೆಳೀತಾವೆ ಅನ್ನೋ ಉದ್ದೇಶದಿಂದ ಗಿಡಗಳನ್ನು ಹಚ್ಚಿದ್ದಾರೆ. ಹೆದ್ದಾರಿ ಬದಿ ಸೇರಿದಂತೆ ಖಾಲಿ ಇರುವ ಜಾಗದಲ್ಲಿ ಹಸಿರ ರಂಗೋಲಿ ಬಿಡಿಸಿದ್ದಾರೆ. ಕಳೆದ 13 ವರ್ಷಗಳಲ್ಲಿ ಸುಮಾರು 1 ಲಕ್ಷಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಜೀತ್ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಪ್ರತಿವರ್ಷ ತಮ್ಮ ಮಕ್ಕಳ ಶಾಲಾ ಪ್ರಾರಂಭೋತ್ಸವ ದಿನದಂದು ಇಡೀ ಕುಟುಂಬ ಗಿಡ ನೆಡುತ್ತದೆ. ಮೊದಲು ಅರಣ್ಯ ಇಲಾಖೆಯವರು ದುಡ್ಡು ಕೊಟ್ಟರೆ ಸಸಿ ಕೊಡ್ತಿದ್ರು. ಆದ್ರೀಗ ಇವರ ಸಮಾಜ ಸೇವೆ ನೋಡಿ, ಉಚಿತವಾಗಿ ಗಿಡ ಕೊಡ್ತಿದೆ. ಇವರಿಗೆ ಒಂದಿಷ್ಟು ಸ್ನೇಹಿತರೂ ಸಾಥ್ ನೀಡಿದ್ದಾರೆ. ಯಾವುದೇ ಪ್ರಚಾರದ ಹಂಗಿಲ್ಲದೆ ನಿಸ್ವಾರ್ಥವಾಗಿ ಬಾನೆತ್ತರಕ್ಕೆ ಮರ ಗಿಡ ಬೆಳೆಸುತ್ತಿದ್ದಾರೆ.

 

 

Leave a Reply

Your email address will not be published. Required fields are marked *