ಉಡುಪಿ: ಕರಾವಳಿ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷಕ್ಕೆ ಹಸುಗಳೇ ಕಾರಣವಾಗೋದೇ ಹೆಚ್ಚು. ಆದ್ರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಮುಸ್ಲಿಂ ಕುಟುಂಬವೊಂದು ಭಾರತೀಯ ಪಶು ತಳಿಯನ್ನು ಮಕ್ಕಳಂತೆ ಸಂರಕ್ಷಣೆ ಮಾಡ್ತಿದೆ.
ಹೌದು. ಉಡುಪಿಯ ಉಪ್ಪಿನಕೋಟೆ ಇರ್ಷಾದ್ ಅವರ ಫಾರ್ಮ್ ನಲ್ಲಿ ಅದ್ಭುತ ಪಶುಗಳಿವೆ. ದೇಸೀ ತಳಿ ರಕ್ಷಣೆಗೆ ಪಣತೊಟ್ಟಿರೋ ಇರ್ಷಾದ್ ಮತ್ತವರ ಕುಟುಂಬ 32 ವರ್ಷಗಳ ಹಿಂದಿನಿಂದಲೂ `ಮನಾಮಾ ಫಾರ್ಮ್ ಹೌಸ್’ನಲ್ಲಿ ಈ ಹಸುಗಳನ್ನು ಸಾಕುತ್ತಿದ್ದಾರೆ. ಫಾರ್ಮ್ ಹೌಸಲ್ಲಿ ಗೀರ್, ಓಂಗೋಲ್, ಸಾಯ್‍ವಾನ್, ರೆಡ್ ಸಿಂಧಿ ಹಸು ಮತ್ತು ಕರು ಸೇರಿ ಒಟ್ಟು 25 ಹಸುಗಳಿದ್ದು, ನಾಲ್ಕು ತಳಿಗಳನ್ನು ಅಭಿವೃದ್ಧಿಪಡಿಸ್ತಿದ್ದಾರೆ.
Advertisement
Advertisement
ಗುಜರಾತ್, ಪಂಜಾಬ್, ಪಾಕಿಸ್ತಾನ ಗಡಿಭಾಗಗಳಿಂದ ಈ ಹಸು, ಎತ್ತುಗಳನ್ನು ತಂದಿದ್ದೇವೆ. ಜೊತೆಗೆ, ಕರ್ನಾಟಕದ ದೇಸೀತಳಿ ಮರೆಯಾಗ್ತಿರೋ ಮಲೆನಾಡು ಗಿಡ್ಡ ಹಸುಗಳ ಉಳಿಸಲು ಮನಾಮಾದಲ್ಲಿ ಪ್ರಯತ್ನ ಮಾಡಲಾಗ್ತಿದೆ. ಸುಮಾರು 13 ಬಗೆಯ ಧಾನ್ಯಗಳನ್ನು ಸೇರಿಸಿ ಪಶು ಆಹಾರವನ್ನು ಇಲ್ಲೇ ತಯಾರಿಸಿ ಹಸುಗಳಿಗೆ ಕೊಡಲಾಗುತ್ತದೆ ಎಂದು ಇರ್ಷಾದ್ ಸಹೋದರ ಮುದಾಸಿರ್ ತಿಳಿಸಿದ್ದಾರೆ.
Advertisement
ಮನಾಮಾ ಫಾರ್ಮ್‍ನ ಮತ್ತೊಂದು ಆಕರ್ಷಣೆ ಸುಲ್ತಾನ್ ಹೋರಿ. ಓಂಗೋಲ್ ತಳಿಯ ಈ ಹೋರಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್. ಇದಕ್ಕೆ 3 ಲಕ್ಷಕ್ಕೆ ಡಿಮಾಂಡ್ ಇದೆ. ಆದರೆ, ನಾವಿದನ್ನ ಮಾರೋದಿಲ್ಲ ಎಂದು ಹೈನುಗಾರಿಕೆ ಜೊತೆಗೆ ಕ್ಯಾಟರಿಂಗ್ ಮಾಡ್ತಿರೋ ಇರ್ಷಾದ್ ಕುಟುಂಬ ಹೇಳುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv