ಕೋಲಾರ: ಆತ ಪಿಯುಸಿಯಲ್ಲಿ ಇಂಗ್ಲಿಷ್‍ನಲ್ಲಿ ಫೈಲ್ ಆಗಿ ಎಲ್ಲಾ ರೀತಿಯ ಕೂಲಿ ಕೆಲಸ ಮಾಡಿ ಅಲ್ಲದೆ ಸಾಕಷ್ಟು ಅವಮಾನ ಸಹಿಸಲಾಗದೆ, ಜೀವನ ಬೇಸರಗೊಂಡ ಕೆಲಸದಿಂದ ಹೊರ ಬಂದಿದ್ದನು. ಬಳಿಕ ಮತ್ತೆ ಇಂಗ್ಲಿಷ್ ಕಲಿತು ತನ್ನ ಗುರುಗಳಿಗೆ ಇಂಗ್ಲಿಷ್ ಹೇಳಿಕೊಡುವ ಇಂಗ್ಲಿಷ್ ಪರ್ಸನ್ ಆಗಿದ್ದಾನೆ. ಇದೀಗ ಅಧಿಕಾರಿಗಳು ಸೇರಿದಂತೆ ಗಣ್ಯರಿಗೆ ಇಂಗ್ಲಿಷ್ ಕಲಿಸುತ್ತಿರುವ ಇಂಗ್ಲೀಷ್ ಸೋರ್ಸ್ ಪರ್ಸನ್ ಕೋಲಾರ ಜಿಲ್ಲೆಯ ರಮೇಶ್.
Advertisement
ಹೌದು. 2012ರಲ್ಲಿ ಇಂಗ್ಲಿಷ್ ಬಾರದೇ ಪಿಯುಸಿ ಫೇಲ್ ಆಗಿದ್ದರು. ಕೂಲಿ ನಾಲಿ ಮಾಡಿ, ಜೀವನದಲ್ಲಿ ಬೇಸರಗೊಂಡರು. ಇಂಗ್ಲಿಷ್ ಕಲಿಯಲೇಬೇಕೆಂಬ ಹಠ ಹುಟ್ಟುತ್ತೆ. ಸಿಕ್ಕ ಸಿಕ್ಕ ಇಂಗ್ಲಿಷ್ ಪುಸ್ತಕ ಓದಲು ಶುರು ಮಾಡ್ತಾರೆ. ಮರದ ಜೊತೆ ಇಂಗ್ಲಿಷ್‍ನಲ್ಲಿ ಮಾತನಾಡಲು ತೊಡಗ್ತಾರೆ. ಬಸ್ಸಲ್ಲಿ, ಊರಲ್ಲಿ ಹೀಗೆ ಎಲ್ಲಾ ಕಡೆ ಇಂಗ್ಲಿಷ್‍ನಲ್ಲಿ ಮಾತನಾಡೋಕೆ ಶುರು ಮಾಡ್ತಾರೆ. ಜನ ಹುಚ್ಚ ಅಂತಾರೆ. ಕನ್ನಡ ಮಾತಾಡು ಅಂತ ಬೆದರಿಸ್ತಾರೆ. ಆದರೆ ರಮೇಶ್ ಮಾತ್ರ ಇದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ.
Advertisement
Advertisement
ಹೀಗೆ ಹಠ ಹಿಡಿದು ಇಂಗ್ಲಿಷ್ ಕಲಿತ ರಮೇಶ್, ಪಿಯುಸಿ ಪಾಸ್ ಮಾಡಿಕೊಳ್ತಾರೆ. ಡಿಗ್ರಿಯಲ್ಲಿ 98 ಪರ್ಸೆಂಟ್ ಮಾಕ್ರ್ಸ್ ಗಳಿಸ್ತಾರೆ. ಇಂದು ಇಂಗ್ಲಿಷನ್ನು 14 ದೇಶಗಳ ಶೈಲಿಯಲ್ಲಿ ನಿರರ್ಗಳವಾಗಿ ಮಾತಾಡುತ್ತಾರೆ. ಮಲೇಷಿಯಾ, ಸಿಂಗಾಪುರದಲ್ಲಿ 6 ತಿಂಗಳ ಕಾಲ ಟೂರಿಸ್ಟ್ ಗೈಡ್ ಆಗಿದ್ದ ರಮೇಶ್, ನಂತ್ರ ಊರಿಗೆ ಬಂದು ಸರ್ಕಾರಿ ಶಾಲಾ ಕಾಲೇಜುಗಳಿಗೆ ರಿಸೋರ್ಸ್ ಪರ್ಸನ್ ಆಗಿದ್ದಾರೆ. ತನಗೆ ಇಂಗ್ಲಿಷ್ ಹೇಳಿಕೊಟ್ಟ ಶಿಕ್ಷಕರಿಗೆ ಇಂದು ಇಂಗ್ಲಿಷ್ ಹೇಳಿಕೊಡ್ತಿದ್ದಾರೆ.
Advertisement
ಅಷ್ಟೇ ಅಲ್ಲ, ಡ್ಯಾಫೋಡಿಲ್ಸ್ ಸ್ಪೋಕನ್ ಇಂಗ್ಲಿಷ್ ಸಂಸ್ಥೆ ಆರಂಭಿಸಿರೋ ರಮೇಶ್, ವಿದ್ಯಾರ್ಥಿಗಳು, ಉನ್ನತ ಅಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು, ಜನಪ್ರತಿನಿಧಿಗಳಿಗೆ 3 ತಿಂಗಳಲ್ಲಿ ಇಂಗ್ಲಿಷ್ ಹೇಳಿಕೊಡುವ ಕೆಲಸ ಮಾಡ್ತಿದ್ದಾರೆ. ವಾಯ್ಸ್ ಮಾಡ್ಯುಲೇಷನ್ ಹೇಳಿಕೊಡ್ತಾರೆ.
ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಎಂಬುದನ್ನು ರಮೇಶ್ ಮತ್ತೊಮ್ಮೆ ನಿರೂಪಿಸಿದ್ದಾರೆ. ರಮೇಶ್‍ಗೆ ಈಗ ಭಾಷೆಯೇ ಬಂಡವಾಳವಾಗಿದೆ.