ಬಾಲ ರಾಮಾಚಾರಿಯಾಗಿ ವಿಷ್ಣು ಪಾತ್ರಕ್ಕೆ ಜೀವ- ದಿವ್ಯಾಂಗರು, ಗರ್ಭಿಣಿಯರಿಗೆ ಉಚಿತ ಊಟ ನೀಡ್ತಿದ್ದಾರೆ ಹೇಮಚಂದ್ರ..!

Public TV
1 Min Read
HVR copy

ಹಾವೇರಿ: ಕನ್ನಡ ಅಲ್ಲ ಭಾರತ ಸಿನಿ ಇತಿಹಾಸದ ಪುಟ ಸೇರಿರೋದು ನಾಗರಹಾವು. ಈ ಚಿತ್ರದ ಮೂಲಕ ಎಂಟ್ರಿಕೊಟ್ಟ ವಿಷ್ಣುವರ್ಧನ್, ಅಂಬರೀಶ್ ದಿಗ್ಗಜರಾಗಿದ್ದಾರೆ. ಚಿತ್ರದಲ್ಲಿ ಹೇಮಚಂದ್ರ ಬಾಲರಾಮಾಚಾರಿಯಾಗಿ ಕಾಣಿಸಿಕೊಂಡಿದ್ದರು. ಅವರೀಗ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿದ್ದು, ಪಬ್ಲಿಕ್ ಹೀರೋ ಆಗಿದ್ದಾರೆ.

vlcsnap 2018 11 28 08h17m54s44

ಹೇಮಚಂದ್ರ ಅವರು ನಾಗರಹಾವು ಚಿತ್ರದಲ್ಲಿ ಬಾಲ ರಾಮಾಚಾರಿಯಾಗಿ ನಟಿಸಿದ್ದು, ಇವರು ಹಾವೇರಿಯ ಹಿರೇಕೆರೂರು ತಾಲೂಕಿನ ಹಂಸಭಾವಿದಲ್ಲಿ ನೆಲೆಸಿದ್ದಾರೆ. ಮೂಲತಃ ಬೆಳಗಾವಿಯ ಗೋಕಾಕ್‍ನವರಾದ ಹೇಮಚಂದ್ರ, ಉತ್ತರ ಕರ್ನಾಟಕದ ಮೊದಲ ನಾಟಕ ಕಂಪನಿ `ಶಾರದಾ ಸಂಗೀತ’ದ ಮಾಲೀಕ ಬಸವರಾಜ ಹೊಸಮನಿ ಅವರ ಪುತ್ರ. ಅಪ್ಪನ ನಾಟಕ ಕಂಪನಿಯಲ್ಲಿ ಬಾಲನಟನಾಗಿ ಹೇಮಚಂದ್ರ ಆಗಲೇ ಬಣ್ಣ ಹಚ್ಚಿದ್ದರು.

ನಂತರ ರಾಜ್ ಅಭಿನಯದ ಸಂಪತ್ತಿಗೆ ಸವಾಲ್ ಹಾಗೂ ಚಾಮುಂಡೇಶ್ವರಿ ಮಹಾತ್ಮೆ, ಸ್ವಯಂವರ ಚಿತ್ರದಲ್ಲಿ ನಟಿಸಿದ್ದರು. ನಾಟಕ ಕಂಪನಿ ಮುಚ್ಚಿದಾಗ ಹಂಸಭಾವಿಗೆ ಬಂದು ನೆಲೆಸಿದ್ದು`ಮನೆ ಊಟ’ ಖಾನಾವಳಿ ಇಟ್ಟುಕೊಂಡಿದ್ದಾರೆ. ಗ್ರಾಮದಲ್ಲಿ ಬಾಲರಾಮಾಚಾರಿ ಅಂತಲೇ ಫೇಮಸ್ ಆಗಿದ್ದಾರೆ.

vlcsnap 2018 11 28 08h18m22s64 e1543373564829

ಒಂದು ಊಟಕ್ಕೆ 60 ರೂಪಾಯಿ ನಿಗದಿ ಮಾಡಿರೋ ಹೇಮಚಂದ್ರ ಅವರು ಕಳೆದ 16 ವರ್ಷಗಳಿಂದ ದಿವ್ಯಾಂಗರಿಗೆ ವಿಶೇಷ ರಿಯಾಯತಿ ನೀಡಿದ್ರೆ, ಪತ್ನಿಯ ಆಸೆಯಂತೆ ಗರ್ಭಿಣಿಯರಿಗೆ ಉಚಿತವಾಗಿ ಊಟ ನೀಡ್ತಿದ್ದಾರೆ ಅಂತ ಗ್ರಾಮಸ್ಥ ಬಸವನಗೌಡ ಹೊಸಳ್ಳಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ವಿಷ್ಣುವರ್ಧನ್, ರಾಜಕುಮಾರ್ ಅಂತ ನಟ ಬಾಲಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ ಅನ್ನೋ ಹಮ್ಮು-ಬಿಮ್ಮು ಇಲ್ಲದೆ, ಹಂಸಭಾವಿಯಲ್ಲಿ ವಿಶಿಷ್ಟವಾಗಿ ಗುರ್ತಿಸಿಕೊಂಡು ಬದುಕುತ್ತಿದ್ದಾರೆ.

https://www.youtube.com/watch?v=R4PKVyyKDUc

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *