ದಾವಣಗೆರೆ: ಲಾಭವಿಲ್ಲದೇ ಯಾರೂ ಯಾವ ಕೆಲಸನೂ ಮಾಡಲ್ಲ. ಆದ್ರೆ ನಮ್ಮ ಪಬ್ಲಿಕ್ ಹೀರೋ ನಿಸ್ವಾರ್ಥ ಭಾವನೆಯಿಂದ ರಕ್ತದಾನ ಮಾಡ್ತಿದ್ದಾರೆ. 15 ಸ್ನೇಹಿತರಿಂದ ಶುರುವಾದ ರಕ್ತದಾನ, ಇವತ್ತು 3 ಸಾವಿರ ಸದಸ್ಯರಿಗೆ ತಲುಪಿದೆ.
ದಾವಣಗೆರೆಯ ನಿಟ್ಟುವಳ್ಳಿ ಬಡಾವಣೆ ನಿವಾಸಿ ಗೋಪಿನಾಥ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಮೆಡಿಕಲ್ ಕಾಲೇಜ್‍ನಲ್ಲಿ ದೈಹಿಕ ಶಿಕ್ಷಕರಾಗಿದ್ದಾರೆ. ಜೊತೆಗೆ ಕ್ರಿಕೆಟ್ ಕೋಚ್ ಕೆಲ ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಅಪಘಾತವಾಗಿ, ರಕ್ತವಿಲ್ಲದೇ ಗಾಯಾಳುಗಳು ಒದ್ದಾಡ್ತಿದ್ರು. ಆ ದೃಶ್ಯ ನೋಡಿ ಇವರು ರಕ್ತದಾನ ಮಾಡಬೇಕೆಂದು ನಿರ್ಧರಿಸಿದ್ರು.
15 ಮಂದಿ ಸ್ನೇಹಿತರ ಸದಸ್ಯತ್ವದಿಂದ ಶುರುವಾದ `ಲೈಫ್ ಲೈನ್’ ಎನ್ನುವ ಸಂಸ್ಥೆ ಇವತ್ತು ಮೂರು ಸಾವಿರ ಸದಸ್ಯರನ್ನ ಹೊಂದಿದೆ. ಯಾರೇ ಎಷ್ಟೇ ಹೊತ್ತಲ್ಲಿ ರಕ್ತ ಕೇಳಿದ್ರೂ ಗೋಪಿನಾಥ್ ಅವರ ಬಳಿ ರೆಡಿ ಇರುತ್ತೆ. ಎಷ್ಟೇ ದೂರ ಇದ್ರೂ ಹೋಗಿ ರಕ್ತದಾನ ಮಾಡುತ್ತಾರೆ. ಗೋಪಿನಾಥ್ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಾರೆ. ಈವರೆಗೆ 57 ಬಾರಿ ರಕ್ತದಾನ ಮಾಡಿದ್ದಾರೆ.
ಗೋಪಿನಾಥ್‍ಗೆ ಸ್ನೇಹಿತರಷ್ಟೇ ಅಲ್ಲ. ಇವರ ಕುಟುಂಬವೂ ಸಾಥ್ ನೀಡಿದೆ. ನೃತ್ಯಪಟು ಹಾಗೂ ಕ್ರೀಡಾಪಟುವಾದ ಗೋಪಿನಾಥ್ ರವರ ಪತ್ನಿ ಮಾಧವಿ ಅವರ ಸಹ 8 ಬಾರಿ ರಕ್ತದಾನ ಮಾಡಿದ್ದಾರೆ.