ಕೊಪ್ಪಳ: ಈ ಬರಗಾಲದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರೂ ಸಿಗುತ್ತಿಲ್ಲ. ಮೂರ್ನಾಲ್ಕು ಕಿಲೋ ಮೀಟರ್ ಅಲೆದಾಡಿದ್ರೂ ಜಾನುವಾರುಗಳಿಗೆ ಹನಿ ನೀರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರೊಬ್ಬರು ಬೆಳೆ ಬೆಳೆಯಲು ಹಾಕಿಸಿದ್ದ ಬೋರ್‍ವೆಲ್‍ನಲ್ಲೇ ಜಾನುವಾರುಗಳಿಗೆ ನೀರು ಕುಡಿಸುತ್ತಿದ್ದಾರೆ.
ಹೌದು. ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದ ನಮ್ಮ ಪಬ್ಲಿಕ್ ಹೀರೋ ಗವಿಸಿದ್ದಪ್ಪ ಅವರು ನೀರಿನ ಹೊಂಡ ಮಾಡಿ ಜಾನುವಾರುಗಳಿಗೆ ನೀರು ಕುಡಿಸುತ್ತಿದ್ದಾರೆ. ಬರಗಾಲದಲ್ಲಿ ಏನಾದ್ರೂ ಬೆಳೆಯೋಣ ಅಂದುಕೊಂಡು 21 ಬೋರ್‍ವೆಲ್ ಕೊರೆಸಿದವರಿಗೆ ನೀರು ಬಂದಿದ್ದು ಎರಡೇ ಬೋರ್‍ವೆಲ್‍ನಲ್ಲಿ ಮಾತ್ರ. ಆದರೆ, ಈ ನೀರಿನಲ್ಲಿ ಕೃಷಿ ಮಾಡುವ ಬದಲು ಜಾನುವಾರುಗಳಿಗೆ ಉಚಿತವಾಗಿ ನೀರು ಕೊಡುವ ಮೂಲಕ ಮೂಕ ಪ್ರಾಣಿಗಳ ದಾಹ ನೀಗಿಸುತ್ತಿದ್ದಾರೆ.
Advertisement
ಹಿರೇಬಗನಾಳ ಗ್ರಾಮ ತುಂಗಾಭದ್ರಾ ಜಲಾಶಯ ಪಕ್ಕದಲ್ಲೇ ಇದ್ರೂ ಹನಿ ನೀರಿಗಾಗಿ ಪರದಾಡಬೇಕು. ಇಂಥ ಕಷ್ಟ ಕಂಡ ಗವಿಸಿದ್ದಪ್ಪ ಭಗೀರಥನಂತೆ ಜಾನುವಾರುಗಳ ಪ್ರಾಣ ಉಳಿಸುತ್ತಿದ್ದಾರೆ.
Advertisement
ಎರಡು ಬೋರ್‍ವೆಲ್ ನೀರಿನಲ್ಲಿ 10 ಎಕರೆಯಲ್ಲಿ ಏನಾದ್ರೂ ಬೆಳೆದು ಲಕ್ಷ ಲಕ್ಷ ದುಡ್ಡು ಸಂಪಾದನೆ ಮಾಡಬಹುದಿತ್ತು. ಆದರೆ, ಮೂಕ ಪ್ರಾಣಿಗಳ ಪಾಲಿಗೆ ದೇವರಾದ ಗವಿಸಿದ್ದಪ್ಪ ನಿಜಕ್ಕೂ ನಮ್ಮ ಪಬ್ಲಿಕ್ ಹೀರೋ ಅನ್ನೋದಕ್ಕೆ ನಮಗೆ ಹೆಮ್ಮೆ ಆಗುತ್ತೆ.
Advertisement
https://www.youtube.com/watch?v=bAXRmvXy6Rw
Advertisement