ಬಳ್ಳಾರಿ: ಸಕಲ ಅಂಗಗಳು ಸರಿಯಾಗಿದ್ದರೂ ಕೆಲವರು ಸೋಮಾರಿಗಳಾಗಿರುತ್ತಾರೆ. ಆದರೆ ಹುಟ್ಟು ಅಂಧರಾದವರು ಸ್ವಾವಲಂಬಿ, ಅದರಲ್ಲೂ ಸವಾಲೆನಿಸುವ ಶಿಕ್ಷಕ ಕೆಲಸವನ್ನು ಮಾಡುತ್ತಿದ್ದಾರೆ.
ಬ್ರೈಲ್ ಲಿಪಿ ಸಹಾಯದದಿಂದ ಮಕ್ಕಳಿಗೆ ಈರಪ್ಪ ಪಾಠ ಮಾಡುತ್ತಾರೆ. ಇವರು ಮೂಲತ: ಹುಬ್ಬಳ್ಳಿ ಬಳಿಯ ಸುಳ್ಯ ಗ್ರಾಮದವರು. ಇದೀಗ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳೆದೊಂದು ವರ್ಷದಿಂದ ಶಿಕ್ಷಕರಾಗಿದ್ದಾರೆ. ಹುಟ್ಟು ಅಂಧರಾದ ಈರಪ್ಪನವರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ.
Advertisement
ಅಂಧರಾದರೂ ಬಿಎ, ಎಂಎ ಸ್ನಾತಕೋತ್ತರ ಪದವಿ ಪಡೆದಿರುವ ಈರಪ್ಪನವರು ಈ ಹಿಂದೆ ಬಿಎಡ್ ವಿದ್ಯಾಭ್ಯಾಸ ಮಾಡಲು ಮುಂದಾದಾಗ ಅವರಿಗೆ ಅವಕಾಶ ದೊರೆತಿರಲಿಲ್ಲ. ಆಗ ಬೆಂಗಳೂರಿನ ಅಂಧರ ಒಕ್ಕೂಟದ ಮೂಲಕ ಹೈಕೋರ್ಟ್ ಮೇಟ್ಟಿಲೇರಿ ನಂತರ ಸುಪ್ರೀಂಕೋರ್ಟ್‍ನಿಂದ ಅನುಮತಿ ಪಡೆದು ಬಿ.ಎಡ್ ಮುಗಿಸಿದ್ದಾರೆ.
Advertisement
ಮಕ್ಕಳಿಗೆ ಬ್ರೈಲ್ ಹಾಗೂ ಸ್ಮಾರ್ಟ್ ಮೊಬೈಲ್ ಮೂಲಕವೂ ಪಾಠ ಕಲಿಸುತ್ತಿದ್ದಾರೆ. ಇನ್ನೂ ವಿಶೇಷ ಏನೆಂದರೆ ಮಕ್ಕಳನ್ನು ಲೀಡರ್‍ಗಳನ್ನಾಗಿ ಮಾಡಿ ಅವರಿಂದಲೇ ಬೋರ್ಡ್‍ಗಳ ಮೇಲೆ ಅಕ್ಷರಗಳನ್ನು ಬರೆಯಿಸಿ ಪಾಠ ಮಾಡುತ್ತಿದ್ದಾರೆ.
Advertisement
ಈರಪ್ಪ ಅವರ ತಂದೆ-ತಾಯಿಗೆ ಐವರು ಮಕ್ಕಳು. ಇಬ್ಬರು ಪುತ್ರಿಯರಿಗೆ ಕಣ್ಣು ಕಾಣಿಸುತ್ತದೆ. ಆದ್ರೆ ಈರಪ್ಪ ಹಾಗೂ ಇನ್ನಿಬ್ಬರು ಸಹೋದರರಿಗೆ ಕಣ್ಣು ಕಾಣಿಸುವುದಿಲ್ಲ. ಆದರೂ ಆತ್ಮವಿಶ್ವಾಸದಿಂದ ಈರಪ್ಪ ಜೀವನ ಸಾಗಿಸುತ್ತಿದ್ದಾರೆ.
Advertisement
https://www.youtube.com/watch?v=q1EI1KUMN4s