ಕಲಬುರಗಿ: ಪುರಾತನ ದೇವಾಲಯಗಳ ರಕ್ಷಣೆಗೆ ಸಂಬಂಧಿಸಿದಂತೆ ಇಲಾಖೆಯದ್ದು ನಿರ್ಲಕ್ಷ್ಯವೇ ಜಾಸ್ತಿ. ಆದರೆ ಕಲಬುರಗಿಯ ಯುವಕರ ತಂಡ ಇದುವರೆಗೂ 30ಕ್ಕೂ ಹೆಚ್ಚು ದೇವಾಲಯ-ಪುಷ್ಕರಣಿಗಳಿಗೆ ಕಾಯಕಲ್ಪ ನೀಡಿ, ಶಿಲ್ಪಕಲಾ ವೈಭವವನ್ನು ಎತ್ತಿ ಹಿಡಿಯುತ್ತಿದ್ದಾರೆ. ಇವರೇ ನಮ್ಮ ಪಬ್ಲಿಕ್ ಹೀರೋ.
ಕಲಬುರಗಿ ಜಿಲ್ಲೆ ಬರೀ ತೊಗರಿ ಕಣ ಅಂತ ಮಾತ್ರ ಪ್ರಸಿದ್ಧಿ ಅಲ್ಲ. ಈ ನೆಲ ಐತಿಹಾಸಿಕ ಶಿಲ್ಪಕಲೆಗೂ ಖ್ಯಾತಿ ಪಡೆದಿದೆ. ಇದರ ಮಹತ್ವ ಅರಿಯದ ಇಲ್ಲಿನ ಜನರಿಂದಾಗಿ ಸುಂದರ ಶಿಲ್ಪಕಲೆಯ ಅನೇಕ ದೇವಾಲಯಗಳನ್ನು ಪಾಳು ಬೀಳಲು ಬಿಟ್ಟಿದ್ದಾರೆ.
Advertisement
Advertisement
ಕಲಬುರಗಿಯ ಪ್ರಜ್ಞಾವಂತ ಯುವಕರು ತಮ್ಮದೇ ಒಂದು ತಂಡ ರಚಿಸಿ, ಪ್ರತಿ ಭಾನುವಾರ ಬೆಳಗ್ಗೆ 6 ಗಂಟೆಗೆ ಒಂದೊಂದು ದೇವಸ್ಥಾನಕ್ಕೆ ಕಾಯಕಲ್ಪ ನೀಡುತ್ತಿದ್ದಾರೆ. ದಿನವಿಡೀ ಕೆಲಸ ಮಾಡಿ ದೇವಾಲಯದ ಗತ ವೈಭವವನ್ನು ಮರುಕಳಿಸುತ್ತಿದ್ದಾರೆ. ಈ ತಂಡದಲ್ಲಿ ವೈದ್ಯರು, ಸರ್ಕಾರಿ ನೌಕರರು, ಖಾಸಗಿ ಕಂಪನಿಗಳ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವವರು ಇದ್ದಾರೆ ಎಂದು ಸರ್ಕಾರಿ ನೌಕರ ನಾಗರಾಜ್ ಹೇಳಿದ್ದಾರೆ.
Advertisement
ಸದ್ಯ ಈ ತಂಡ ಕಲಬುರಗಿಯ ಅತನೂರ, ಮರಗುತ್ತಿ, ಕಾಳಗಿ, ಗೊಬ್ಬುರ ಗ್ರಾಮ ಸೇರಿದಂತೆ ಸುತ್ತಮುತ್ತ 30ಕ್ಕೂ ಹೆಚ್ಚು ಅವಸಾನದಲ್ಲಿದ ದೇವಸ್ಥಾನ ಹಾಗು ಹಲವು ಪುಷ್ಕರ್ಣಿಗಳನ್ನು ಸ್ವಚ್ಛ ಮಾಡಿದ್ದಾರೆ. ಕಳೆದ 2 ವರ್ಷದಿಂದ ತಾವೇ ಹಣ ಹಾಕಿಕೊಂಡು ಈ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ನಿವಾಸಿ ಬಂಟಿ ಹೇಳಿದ್ದಾರೆ.
Advertisement
ಪ್ರವಾಸೋದ್ಯಮ ಇಲಾಖೆ ಅಥವಾ ಸರ್ಕಾರ ಒಂದಿಷ್ಟು ಸಹ ಸಹಾಯ ಮಾಡಿದರೆ ಇಲ್ಲಿನ ಅನೇಕ ಐತಿಹಾಸಿಕ ಶಿಲ್ಪಕಲೆಯನ್ನು ಉಳಿಸುತ್ತೇವೆ ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.
https://www.youtube.com/watch?v=_5eY7NbHRsk
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv