-ದಕ್ಷಿಣ ಭಾರತದಲ್ಲಿಯೇ ಬೆಸ್ಟ್ ಜೈಲು
ಚಿತ್ರದುರ್ಗ: ಸಾಮಾನ್ಯವಾಗಿ ಜೈಲು ಅಂದರೆ ಕೈದಿಗಳ ಪಾಲಿನ ಸೆರೆಮನೆ. ಹೀಗಾಗಿ ತಪ್ಪು ಮಾಡಿ ಜೈಲು ಸೇರಿದವರಿಗೆ ಅಲ್ಲಿ ನರಕಯಾತನೆ ತಪ್ಪಿದ್ದಲ್ಲ ಅನ್ನೋ ಮಾತುಗಳಿವೆ. ಆದರೆ ಕೋಟೆನಾಡು ಚಿತ್ರದುರ್ಗದ ಕಾರಾಗೃಹ ಮಾತ್ರ ಕೈದಿಗಳ ಮನಪರಿವರ್ತನಾ ಕೇಂದ್ರವೆನಿಸಿ, ಅವರ ಪಾಲಿಗೆ ನೆಮ್ಮದಿಯ ಸ್ವರ್ಗವೆನಿಸಿದೆ. ಇದಕ್ಕೆ ಕಾರಣ ಜೈಲಿನ ಅಧೀಕ್ಷಕ ಲೋಕೇಶ್.
Advertisement
ಹೌದು. ಚಿತ್ರದುರ್ಗ ಜಿಲ್ಲಾ ಕಾರಗೃಹದ ಅಧೀಕ್ಷಕ ಲೋಕೇಶ್, ಸಿಬ್ಬಂದಿ ಹಾಗೂ ಕೈದಿಗಳ ಪರಿಶ್ರಮದಿಂದ ಈ ಜೈಲು ದಕ್ಷಿಣ ಭಾರತದಲ್ಲೇ ಬೆಸ್ಟ್ ಎನಿಸಿದೆ. ಕೋಟೆನಾಡಿನ ಜೈಲಿನಲ್ಲಿ ಸುಸಜ್ಜಿತ ವಿಡಿಯೋ ಕಾನ್ಫರೆನ್ಸ್ ಹಾಲ್ ಕೂಡ ಇದೆ. ಅಲ್ಲದೇ ಚಿಕಿತ್ಸೆಗಾಗಿ ಎರಡು ಬೆಡ್‍ಗಳ ಆಸ್ಪತ್ರೆ, ಸಹ ಇಲ್ಲಿದೆ. ಕೈದಿಗಳ ಮನಪರಿವರ್ತನೆಗಾಗಿ ನಿತ್ಯ ವಿಶೇಷ ಪಾಠ ಪ್ರವಚನಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಡುಗೆ ಮನೆ ಕಟ್ಟಡ ಕಾಮಗಾರಿ ಹಾಗೂ ತೋಟದಲ್ಲಿ ದುಡಿದ ಕೈದಿಗಳ ಪರವಾಗಿ ವಕೀಲರಿಗೆ ಮತ್ತು ಕುಟುಂಬಸ್ಥರಿಗೆ 38 ಸಾವಿರ ಹಣ ಕೂಲಿ ತಲುಪಿಸಲಾಗಿದೆ ಎಂದು ಕಾರಾಗೃಹ ಶಿಕ್ಷಕ ಶ್ರೀರಾಮ ರೆಡ್ಡಿ ಹೇಳಿದ್ದಾರೆ.
Advertisement
ಒಟ್ಟಾರೆ ಅಧಿಕಾರಿಗಳು ಮನಸ್ಸು ಮಾಡಿದರೆ ಎಂತಹ ಬದಲಾವಣೆ ಬೇಕಿದ್ದರೂ ತರಬಹುದು ಅನ್ನೋದಕ್ಕೆ ಚಿತ್ರದುರ್ಗ ಜಿಲ್ಲಾ ಕಾರಗೃಹವೇ ಸಾಕ್ಷಿಯಾಗಿದೆ. ಜೈಲು ಅಧೀಕ್ಷಕ ಮತ್ತು ಸಿಬ್ಬಂದಿ ಕೆಲಸ ಎಲ್ಲರಿಗೂ ಮಾದರಿಯಾಗಿದ್ದಾರೆ.