-ಕೋಲಾರದ ಚಿರಾಗ್ ಇವತ್ತಿನ ಪಬ್ಲಿಕ್ ಹೀರೋ
ಕೋಲಾರ: ಮಕ್ಕಳು ಹೇಗಿದ್ದರೂ ಪೋಷಕರು ಪಾಲನೆ ಮಾಡುತ್ತಾರೆ. ಅದು ಕರ್ತವ್ಯ-ಹೊಣೆಯೂ ಹೌದು. ಹಾಗಾಗಿ, ಇವತ್ತಿನ ಪಬ್ಲಿಕ್ ಹೀರೋ ಸ್ಟೋರಿ ಸಾಮಾನ್ಯ ಅಂತ ಅನಿಸಬೋದು. ಆದರೆ ಮಗನಿಗಾಗಿ ಅಪ್ಪ. ಅಪ್ಪನಿಗಾಗಿ ವಿಕಲಚೇತನ ಮಗ ಒಬ್ಬರಿಗೊಬ್ಬರು ಆಧಾರವಾಗಿದ್ದಾರೆ.
ಕೋಲಾರ ಜಿಲ್ಲೆಯ ಅರಹಳ್ಳಿ ಗ್ರಾಮದ ರಮೇಶ್ ಎಂಬವರ ಮಗ ಚಿರಾಗ್ 4ನೇ ತರಗತಿವರೆಗೆ ಎಲ್ಲರಂತೆ ಆಟವಾಡಿ ಬೆಳೆದವನು. ಇದ್ದಕ್ಕಿಂದಂತೆ ಅನಾರೋಗ್ಯ ತುತ್ತಾಗಿದ್ದರಿಂದ ಆತನ ಕೈ-ಕಾಲುಗಳು ಸ್ವಾದೀನ ಕಳೆದುಕೊಂಡವು. ಎಷ್ಟೇ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಇದಕ್ಕೆ ಎದೆಗುಂದದೇ ರಮೇಶ್ ಅವರು ಮಗನ ಗೆಲುವಿಗಾಗಿ ಬೆನ್ನಿಗೆ ನಿಂತಿದ್ದಾರೆ. ಮನೆ ಕೆಲಸವನ್ನೂ ಮಾಡಿಕೊಂಡು, ಮಗನಿಗೂ ಆತ್ಮಸ್ಥೈರ್ಯ ತುಂಬಿದ್ದಾರೆ. 9 ವರ್ಷಗಳಿಂದ ಮಗನಿಗೆ ಯಾವುದರಲ್ಲೂ ಕೊರತೆ ಮಾಡಿಲ್ಲ.
ಅಪ್ಪನ ಕಷ್ಟ, ಬಡತನ ಅರಿತ ಚಿರಾಗ್ ಅಷ್ಟೇ ಆಸಕ್ತಿಯಿಂದ ಓದಿನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿದಿನ 8 ರಿಂದ 10 ಗಂಟೆಗಳ ಕಾಲ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಎಸ್‍ಎಸ್‍ಎಲ್‍ಸಿಯಲ್ಲಿ ಶೇ 75ರಷ್ಟು ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ 67.7ರಷ್ಟು ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾನೆ. ಶಿಕ್ಷಕರು, ಉಪನ್ಯಾಸಕರಿಗೂ ಚಿರಾಗ್ ಅಚ್ಚುಮೆಚ್ಚಿನ ವಿದ್ಯಾರ್ಥಿ. ನಾನು ಚೆನ್ನಾಗಿ ಓದಬೇಕು. ಸರ್ಕಾರಿ ಕೆಲಸ ಪಡೀಬೇಕು. ಅಪ್ಪನ ಕಷ್ಟ ದೂರಾಗಿಸಬೇಕು ಅಂತ ಚಿರಾಗ್ ಪಣತೊಟ್ಟಿದ್ದಾನೆ.
ನನಗೆ ಎಷ್ಟೇ ಕಷ್ಟ ಬಂದರೂ ಆತನ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಮಗನೂ ಕೂಡ ಕಲಿಕೆಯಲ್ಲಿ ಮುಂದೆಯಿದ್ದಾನೆ. ಈಗ ಕಂಪ್ಯೂಟರ್ ಕಲಿಯುವ ಆಸಕ್ತಿ ಇಚ್ಛೆಯನ್ನು ಹೊರ ಹಾಕಿದ್ದಾನೆ. ಅದಕ್ಕೂ ನಾನು ಪ್ರೋತ್ಸಾಹ ನೀಡುತ್ತಿರುವೆ ಎಂದು ರಮೇಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ನನ್ನನ್ನು ದಿನವೂ ಬೈಕ್ ಮೇಲೆ ಅಪ್ಪ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸುತ್ತಿದ್ದರು. ನಾನು ಚನ್ನಾಗಿ ಓದಿ, ಉದ್ಯೋಗ ಪಡೆದುಕೊಂಡು ತಂದೆ-ತಾಯಿಯನ್ನು ನೋಡಿಕೊಳ್ಳಬೇಕು ಎನ್ನುವ ಹಂಬಲವಿದೆ ಎಂದು ಚಿರಾಗ್ ಹೇಳುತ್ತಾರೆ.
https://youtu.be/Ga1-VCyqsjc
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews