ಮಂಡ್ಯ: ಕಳೆದ ಮೂವತ್ತು ವರ್ಷಗಳ ಹಿಂದಿನ ಚಿತ್ರಣವಾಗಿದೆ. ಆ ಸಮಯದಲ್ಲಿ ಕಾಯಿಲೆ ಬಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ ಸೇವೆ ಇರಲಿಲ್ಲ. ಆಗಿನಿಂದ್ಲೂ ಮಂಡ್ಯದ ಮಾರೇಗೌಡನ ದೊಡ್ಡಿ ಜನರ ಪಾಲಿಗೆ ಚಿಕ್ಕಲಿಂಗಯ್ಯನವರ ಕಾರೇ ಅಂಬುಲೆನ್ಸ್. ಅಂದಿನಿಂದ ಉಚಿತ ಸೇವೆ ನೀಡ್ತಿರೋ ಚಿಕ್ಕಲಿಂಗಯ್ಯ ಇಂದಿನ ನಮ್ಮ ಪಬ್ಲಿಕ್ ಹೀರೋ ಆಗಿದ್ದಾರೆ.
ಹೌದು. ಮಂಡ್ಯ ತಾಲೂಕಿನ ಮಾರಗೌಡನ ಹಳ್ಳಿಯಲ್ಲೊಂದು ಬಿಳಿ ಬಣ್ಣದ ಅಂಬಾಸಿಡರ್ ಕಾರ್ ಇದೆ. ಚಿಕ್ಕಲಿಂಗಯ್ಯ ಮಾಲೀಕತ್ವದ ಈ ಕಾರು ಕಳೆದ 30 ವರ್ಷಗಳಿಂದ ಈ ಊರಿನ ಅದೆಷ್ಟೋ ಜನರ ಪ್ರಾಣ ಉಳಿಸಿದೆ. ಯಾಕೆಂದ್ರೆ ಈ ಕಾರು ಒಂದು ರೀತಿ ಮಾರಗೌಡನಹಳ್ಳಿಯ ಅಂಬುಲೆನ್ಸ್ ಅಂದ್ರೆ ತಪ್ಪಾಗಲಾರದು. ಕರೆ ಮಾಡಿದ ತಕ್ಷಣವೇ ಹೊತ್ತುಗೊತ್ತೂ ನೋಡದೇ ಸ್ಪಂದಿಸೋ ಚಿಕ್ಕಲಿಂಗಯ್ಯ ಉಚಿತವಾಗಿ ಕಾರಲ್ಲಿ ರೋಗಿಯನ್ನು ಆಸ್ಪತ್ರೆಗೆ ಸೇರಿಸ್ತಾರೆ.
Advertisement
Advertisement
ಕಾರು ಖರೀದಿಸಿದ ಹೊಸತರಲ್ಲಿ ಕುಟುಂಬದ ಹಿರಿಯರು ನೀಡಿದ ಸಲಹೆ ಮತ್ತು ಆತ್ಮ ಸಂತೋಷಕ್ಕಾಗಿ ಇಂದಿಗೂ ಚಿಕ್ಕಲಿಂಗಯ್ಯ ತಮ್ಮ ಕಾರಿನಲ್ಲಿ ರೋಗಿಗಳಿಗೆ ಉಚಿತ ಸೇವೆ ಒದಗಿಸುತ್ತಿದ್ದಾರೆ. ಮಂಡ್ಯ, ನಾಗಮಂಗಲ, ಬಸರಾಳು, ಮೈಸೂರು ಸೇರಿದಂತೆ ಸುತ್ತಮುತ್ತಲ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ. ಇವರ ಸೇವೆಯನ್ನು ಗ್ರಾಮಸ್ಥರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
Advertisement
ಸದಾ ಊರಿನವರ ಆರೋಗ್ಯ ಸೇವೆಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿಯುತ್ತಿರೋ ಚಿಕ್ಕಲಿಂಗಯ್ಯಗೆ ನಮ್ಮದೊಂದು ಸಲಾಂ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv