ಚಿಕ್ಕಮಗಳೂರು: ನೀರು ಪೂರೈಸಲು ಸರ್ಕಾರ ನಿರ್ಲಕ್ಷಿಸಿದರೂ, ಕಳೆದ 14 ವರ್ಷಗಳಿಂದ ವ್ಯಕ್ತಿಯೊಬ್ಬರು ಗ್ರಾಮಕ್ಕೆ ಜೀವಜಲ ಪೂರೈಕೆ ಮಾಡುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಗಡಬನಹಳ್ಳಿ ಔರಂಗ್ ಹತಿಕ್ ಹುಸೇನ್ ಅವರೇ ಆಧುನಿಕ ಭಗೀರಥ. ಮೋಡಿಗೆರಿ ವಿಧಾನಸಭೆ ಮತಕ್ಷೇತ್ರದ ಶಾಸಕ ಬಿ.ಬಿ.ನಿಂಗಯ್ಯ ಅವರು ಗ್ರಾಮದಲ್ಲಿ ಎರಡು ಬೋರ್ ಕೊರೆಸಿದ್ದರು. ಆದರೆ ಒಂದರಲ್ಲಿ ಕೆಸರು ಬಂದರೆ, ಮತ್ತೊಂದರಲ್ಲಿ ನೀರು ಬರಲಿಲ್ಲ. ಇದರಿಂದಾಗಿ ಸರ್ಕಾರ ಸುಸ್ತಾಗಿತ್ತು. ಸರ್ಕಾರದಿಂದ ಆಗದಿರುವ ಕೆಲಸವನ್ನು ಹುಸೇನ್ ಅವರು ಮಾಡಿ ತೋರಿಸಿದ್ದಾರೆ.
Advertisement
ಗಡಬನಹಳ್ಳಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿದ್ದು, 200ಕ್ಕೂ ಅಧಿಕ ಜನ ವಾಸವಿದ್ದಾರೆ. ಎಲ್ಲರೂ ಕೂಲಿ ಕಾರ್ಮಿಕರು. ಆದರೆ ಇಲ್ಲಿ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ಹೀಗಾಗಿ ಹುಸೇನ್ ಅವರು 14 ವರ್ಷಗಳಿಂದ ವಾರಕ್ಕೆ ಎರಡು ದಿನದಂತೆ (ಮಂಗಳವಾರ ಮತ್ತು ಶುಕ್ರವಾರ) ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ.
Advertisement
ಹುಸೇನ್ ಅವರು ಗ್ರಾಮಸ್ಥರಿಗಾಗಿಯೇ 2 ವರ್ಷದ ಹಿಂದೆ ಕೊಳವೆ ಬಾವಿ ಕೊರೆಸಿದ್ದು, ಅದರಲ್ಲಿ 4 ಇಂಚು ನೀರು ಸಿಗುತ್ತಿದೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ 5 ಸಾವಿರ ಲೀಟರ್‍ನ ಸಿಂಟೆಕ್ಸ್ ತಂದಿಟ್ಟು, ವಿದ್ಯುತ್ ಲಭ್ಯವಿದ್ದಾಗ ನೀರು ತುಂಬಿ, ಬೇಕಾದಾಗ ಜನರಿಗೆ ಬಿಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಮ್ಮ ನೀರಿಗೆ ಹಣ ನೀಡುತ್ತೇವೆ, ವಿದ್ಯುತ್ ಬಿಲ್ ಕೊಡುತ್ತೇವೆ ಅಂತಾ ಬೆಲೆಕಟ್ಟಲು ಮುಂದಾಗಿದ್ದರು. ಆದರೆ ಹುಸೇನ್ ಅವರು, ನಾನು ನೀರನ್ನ ಮಾರುತ್ತಿಲ್ಲ. ನೀರನ್ನು ಮಾರಿ ದುಡಿಯುವ ಸ್ಥಿತಿ ಇನ್ನು ನನಗೆ ಬಂದಿಲ್ಲ ಅಂತ ತಿರುಗೇಟು ನೀಡಿದ್ದಾರೆ.
Advertisement
https://youtu.be/gQbYOWvPxe0