ಕಲಬುರಗಿ: ರಾಜ್ಯದಲ್ಲಿ ಗರಿಷ್ಠ ತಾಪಮಾನ ದಾಖಲಾಗೋ ಜಿಲ್ಲೆಗಳ ಪೈಕಿ ಕಲಬುರಗಿಯೂ ಒಂದು. ಆದ್ರೆ ಇಂದಿನ ಪಬ್ಲಿಕ್ ಹೀರೋ ಡಾಕ್ಟರ್ ಚೇತನ್ ಇಂತಹ ಬಿಸಿಲಿನ ನಡುವೆಯೂ ಎಸಿ, ಕೂಲರ್ ಇಟ್ಟುಕೊಳ್ಳದೆ ಮನೆಯನ್ನ ಕೂಲಾಗಿ ಇಟ್ಟುಕೊಂಡಿದ್ದಾರೆ.
Advertisement
ಕಲಬುರಗಿ ನಗರದ ವೆಂಕಟೇಶ್ವರ ಬಡಾವಣೆಯ ನಿವಾಸಿ ಡಾ.ಚೇತನ ದುರ್ಗಿ ಅವರು ಬಿರುಬೇಸಿಗೆಯಲ್ಲೂ ತಮ್ಮ ಮನೆಗೆ ಎಸಿಯಾಗಲೀ ಅಥವಾ ಕೂಲರ್ ಆಗಲಿ ಅಳವಡಿಸಿಕೊಂಡಿಲ್ಲ. ಬದಲಿಗೆ ಮನೆಯ ಆವರಣದ ತೋಟಕ್ಕೇ ನೀರೆರೆದು ಪೋಷಿಸಿ ಪರಿಸರ ಸ್ನೇಹಿ ಮನೆ ಮಾಡಿಕೊಂಡಿದ್ದಾರೆ. ಈ ಗಾರ್ಡನ್‍ನ್ಲಲಿ 50ಕ್ಕೂ ಅಧಿಕ ವಿವಿಧ ತಳಿಯ ಗಿಡಗಳಿವೆ.
Advertisement
Advertisement
ಮನೆಯ ಮುಂಭಾಗದಿಂದ ಹಿಡಿದು ಮನೆಯ ಯಾವುದೇ ಮೂಲೆ ನೋಡಿದ್ರೂ ಕಣ್ಣಿಗೆ ಹಸಿರೇ ಕಾಣುತ್ತೆ. ಹೊರಗೆ ಎಷ್ಟು ಬಿಸಿಲಿರುತ್ತೋ ಅದಕ್ಕಿಂತ ಮೂರ್ನಾಲ್ಕು ಡಿಗ್ರಿ ಕಡಿಮೆ ಉಷ್ಣತೆ ಇಲ್ಲಿರುತ್ತದೆ. ಡಾ.ಚೇತನ್ ಅವರ ಈ ಪರಿಸರ ಕಾಳಜಿಗೆ ಕುಟುಂಬದವರು ಸಾಥ್ ನೀಡಿದ್ದಾರೆ.
Advertisement
ಈ ಮನೆಯ ಹಸಿರ ಸಿರಿ ಕಂಡ ನಗರದ ಇತರೆ ಜನ ಕೂಡ ಡಾ.ಚೇತನ್ ಅವರನ್ನೇ ಅನುಕರಣೆ ಮಾಡೋಕೆ ಶುರು ಮಾಡಿದ್ದಾರೆ.