ಕೋಲಾರ: ಹನಿ ನೀರಿಗೂ ಪರದಾಡ್ತಿರೋ ಕೋಲಾರದಲ್ಲಿ ಪರಿಸರ ಸ್ನೇಹಿ ಕೃಷಿ ವಿಧಾನದಿಂದ ಅತ್ಯಧಿಕ ಇಳುವರಿ ಪಡೆದಿದ್ದಾರೆ. ಅದರಲ್ಲೂ ಪ್ಲಾಸ್ಟಿಕ್ ಬದಲಿಗೆ ನ್ಯೂಸ್‍ಪೇಪರ್ ಬಳಸಿ ಮಾದರಿ ರೈತನಾಗಿದ್ದಾರೆ. ಇವತ್ತಿನ ಪಬ್ಲಿಕ್ ಹೀರೋದಲ್ಲಿ ಚಂದ್ರಪ್ಪ ಅವರ ಯಶೋಗಥೆ ಇದು.
ಹೌದು. ಕ್ಯಾಪ್ಸಿಕಂ ಬೆಳೆಗೆ ನ್ಯೂಸ್ ಪೇಪರ್ ಅಳವಡಿಸುತ್ತಿರುವ ರೈತ ಚಂದ್ರಪ್ಪ ಅವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಇವರು ಕೋಲಾರದ ಜನ್ನಘಟ್ಟ ಗ್ರಾಮದವರು. ಬಯಲುಸೀಮೆಯಲ್ಲಿ ನದಿನಾಲೆಗಳಿಲ್ಲ, ಅಂತರ್ಜಲವಂತೂ ಪಾತಾಳ ಸೇರಿದೆ. ಆದಾಗ್ಯೂ ರೈತ ಚಂದ್ರಪ್ಪ ಮಾತ್ರ ಬಂಗಾರದಂತ ಬೆಳೆ ಬೆಳೆದಿದ್ದಾರೆ.
Advertisement
ಸ್ವಲ್ಪ ನೀರನ್ನ ಉಪಯೋಗ ಮಾಡಿಕೊಂಡು ಪ್ಲಾಸ್ಟಿಕ್ ಪೇಪರ್ ಬದಲಿಗೆ ನ್ಯೂಸ್ ಪೇಪರ್ ಬಳಸಿ ನೀರಿನ ಆವಿ ತಡೆಗಟ್ಟಿದ್ದಾರೆ. ಪ್ಲಾಸ್ಟಿಕ್ ಪೇಪರ್ ಬಳಸಿದರೆ ಎಕರೆಗೆ 20 ಸಾವಿರ ಖರ್ಚಾಗುತ್ತೆ. ಆದ್ರೆ ನ್ಯೂಸ್‍ಪೇಪರ್ ಬಳಕೆಯಿಂದ ಕೇವಲ ಒಂದೂವರೆ ಸಾವಿರ ಮಾತ್ರ ಖರ್ಚಾಗಿದೆ ಎಂದು ರೈತ ಚಂದ್ರಪ್ಪ ಅವರು ಹೇಳಿದ್ದಾರೆ.
Advertisement
ಪ್ಲಾಸ್ಟಿಕ್ ಪೇಪರ್ ಬಳಕೆಯಿಂದ ಪರಿಸರ ಮಾಲಿನ್ಯವಾಗುತ್ತೆ, ಮಣ್ಣು ಕಲುಶಿತವಾಗುತ್ತೆ. ಒಂದೊಮ್ಮೆ ಪ್ರಾಣಿಗಳು ತಿಂದರೆ ಪ್ರಾಣ ಹೋಗುತ್ತೆ. ಆದರೆ ನ್ಯೂಸ್ ಪೇಪರ್ ಬಳಕೆಯಿಂದ ಇದೆಲ್ಲಾ ತಪ್ಪುತ್ತದೆ ಎಂದು ಕೋಲಾರದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ರಾಜು ಅವರು ಹೇಳಿದ್ದಾರೆ.
Advertisement
ಚಂದ್ರಪ್ಪ ಅವರು ಸದ್ಯಕ್ಕೆ ಎರಡು ಎಕರೆಗೂ ನ್ಯೂಸ್ ಪೇಪರನ್ನೇ ಬಳಸಿ ಅಧಿಕ ಇಳುವರಿ ಪಡೆದಿದ್ದಾರೆ. ಇದನ್ನೆಲ್ಲಾ ನೋಡಿದ ಗ್ರಾಮಸ್ಥರು ಮತ್ತು ನೆರೆ ಗ್ರಾಮದವರೂ ಸಹ ಇವರನ್ನೇ ಫಾಲೋ ಮಾಡ್ತಿದ್ದಾರೆ.
Advertisement
https://youtu.be/IXV7J_dExjU