– ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಿದ ಕೀರ್ತಿ
ದಾವಣಗೆರೆ: ಜಿಲ್ಲಾ ಪಂಚಾಯತ್ ಸಿಇಒಗಳು ಎಸಿ ರೂಮ್ ಬಿಟ್ಟು ಹೊರಗೆ ಬರಲ್ಲ ಅನ್ನೋ ಟೀಕೆ ಇದೆ. ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ದಾವಣಗೆರೆಯ ಮಹಿಳಾ ಅಧಿಕಾರಿ ಅಶ್ವತಿ ಅವರು ಮನೆ ಮನೆಗೂ ತೆರಳಿ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸಿ, ಜಿಲ್ಲೆಯನ್ನ ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಿದ್ದಾರೆ.
ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತ ಮಾಡಲು ಪಣತೊಟ್ಟು ಸಾಧಿಸಿದ್ದಾರೆ. ಜಿಲ್ಲೆಯ 6 ತಾಲೂಕುಗಳ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ರಾಜ್ಯದಲ್ಲೇ ದಾವಣಗೆರೆಯನ್ನ ಪ್ರಥಮ ಬಯಲು ಮುಕ್ತ ಶೌಚಮುಕ್ತ ಜಿಲ್ಲೆಯನ್ನಾಗಿಸಿದ್ದಾರೆ.
Advertisement
Advertisement
ಕೆಲ ತಿಂಗಳ ಹಿಂದೆ ಚನ್ನಗಿರಿ ತಾಲೂಕಿನ ದೇವರಹಳ್ಳಿಗೆ ಭೇಟಿ ನೀಡಿದ್ದರು. ಈ ವೇಳೆ ಶೌಚಾಲಯ ನಿರ್ಮಿಸಲು ಬೈರಪ್ಪ ಎಂಬಾತ ಒಪ್ಪಲಿಲ್ಲ. ಆಗ ಸ್ವತಃ ತಾವೇ ಸಲಿಕೆ ಹಿಡಿದು ಅಶ್ವತಿ ಅವರು ಗುಂಡಿ ತೆಗೆದು, ಶೌಚಾಲಯ ನಿರ್ಮಿಸಿಕೊಳ್ಳೋವರೆಗೂ ಬಿಡಲಿಲ್ಲ.
Advertisement
ಅಶ್ವತಿಯವರ ಜಾಗೃತಿಯಿಂದ ಶೌಚಾಲಯ ನಿರ್ಮಿಸಿಕೊಂಡ ಮಹಿಳೆಯರಿಗೆ ಸನ್ಮಾನ, ಬಾಣಂತಿಯರಿಗೆ ಸೀಮಂತ, ಉಡಿ ತುಂಬುವ ಕೆಲಸವನ್ನೂ ಮಾಡಿದ್ದಾರೆ. ಜೊತೆಗೆ, ನರೇಗಾ ಹಾಗೂ ಕೂಲಿಗಾಗಿ ಕಾಳು ಯೋಜನೆಯಲ್ಲಿ ಕೆರೆ ಹೂಳೆತ್ತುವಾಗ ಕೂಲಿ ಕಾರ್ಮಿಕರ ಜೊತೆ ಊಟ ಮಾಡಿ ಸರಳತೆ ತೋರಿದ್ದಾರೆ. ಸಿಬ್ಬಂದಿಗಳ ಜೊತೆ ಕ್ರೀಡೆ, ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗಿ ವಿಶ್ವಾಸ ಗಳಿಸಿ ಮಾದರಿ ಅಧಿಕಾರಿಯಾಗಿದ್ದಾರೆ.
Advertisement
https://www.youtube.com/watch?v=SRrNsZZ2k34