ವಿಜಯಪುರ: ವಿಧವೆ ಅಂದ್ರೆ ಸಾಕು ಒಂಥರ ನೋಡ್ತಾರೆ. ಅಪಶಕುನ ಅಂತಾರೆ. ಹೊರಗೆ ಬರಬಾರದು ಅಂತಾರೆ. ಆದರೆ, ಇದೆಲ್ಲವನ್ನೂ ಎಡಗಾಲಿನಲ್ಲಿ ಒದ್ದಂತೆ, ಹೀಗಳೆದವರು ನಾಚಿಕೆ ಪಡುವಂತೆ ಬದುಕ್ತಿದ್ದಾರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಭಾರತಿ.
ಹೌದು. ವಿಜಯಪುರದ ಭಾರತಿ ಕಳೆದ ನಾಲ್ಕು ವರ್ಷಗಳ ಹಿಂದೆ ಪತಿ ಮದ್ಯ ಸೇವಿಸಿ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ರು. ಕುಟುಂಬದ ಭಾರವೆಲ್ಲ ಭಾರತಿ ಅವರ ಮೇಲೆ ಬಿತ್ತು. ಈ ವೇಳೆ, ವಿಧವೆ ಅಂತ ಧೃತಿಗೆಡದ ಭಾರತಿ ಅವರು ತಳ್ಳೋಗಾಡಿಯಲ್ಲಿ ಹೋಟೆಲ್ ಪ್ರಾರಂಭಿಸಿದ್ರು. ವಿಜಯಪುರದ ಯೋಧರ ವೃತ್ತದಲ್ಲಿ ಇವರ ಅನುಗ್ರಹ ಹೋಟೆಲ್‍ನಲ್ಲಿ ನಿತ್ಯ ನೂರಾರು ಗ್ರಾಹಕರು ತಿಂತಿದ್ದಾರೆ. ಬಿಸಿನೆಸ್ ಕೂಡ ಚೆನ್ನಾಗಿಯೇ ನಡೆಯುತ್ತಿದೆ ಎಂದು ಭಾರತಿ ಹೇಳುತ್ತಾರೆ.
ಅನುಗ್ರಹ ಹೋಟೆಲ್ ನಲ್ಲಿ ಬೆಳಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಊಟ ಸಿಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಬರುವ ಕಾರಣ 10, 15 ರೂ.ಗೆ ಉಪಾಹಾರ ಕೇವಲ 30 ರೂ.ಗೆ ಊಟ ನಿಗದಿಪಡಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಈ ಹೋಟೆಲ್ ನಲ್ಲಿ ಭಾರತಿ ಅವರ ಜೊತೆ ಕೆಲಸ ಮಾಡುವ ಹೆಚ್ಚಿನವರು ಕೂಡ ವಿಧವೆಯರು ಆಗಿದ್ದಾರೆ.
ಭಾರತಿ ಅವರಿಗೆ ಇಬ್ಬರು ಮಕ್ಕಳು ಇದ್ದು, ಇಬ್ಬರನ್ನು ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ. ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತುಕೊಳ್ಳೋ ಮಹಿಳೆಯರಿಗೆ ಭಾರತಿ ಅವರು ಮಾದರಿಯಾಗಿದ್ದಾರೆ.
https://www.youtube.com/watch?v=2zDG4R07LrA
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv