ದಾವಣಗೆರೆ: ಬಯೋಡೀಸೆಲ್ ತಯಾರಿಕೆಗೆ ಜತ್ರೋಪ, ಹೊಂಗೆ ಜೊತೆಗೆ ಸಿಮರೋಬ ಬೀಜಗಳನ್ನೂ ಸಹ ಬಳಸಲಾಗುತ್ತದೆ. ಆದ್ರೆ, ಆ ಸಿಮರೋಬ ಬೀಜಗಳನ್ನ ಬೇರ್ಪಡಿಸೋದು ಡಿಸೇಲ್ ತಯಾರಿಕರಿಗೆ ಕಷ್ಟ ಸಾಧ್ಯವಾಗಿತ್ತು. ಅಂತಹ ಕಷ್ಟವನ್ನ ಸುಲಭವಾಗಿ ಬಗೆಹರಿಸಿದ್ದಾರೆ ಬಿಇ ವಿದ್ಯಾರ್ಥಿಗಳು.
ಸಿಮರೋಬ ಬೀಜವನ್ನು ಕನ್ನಡದಲ್ಲಿ ಲಕ್ಷ್ಮಿತರು ಅಂತ ಕರೀತಾರೆ. ಜತ್ರೋಪ, ಹೊಂಗೆ, ಸೋಯಾಬಿನ್, ಆಯಿಲ್ ಫಾಮ್ ಬೀಜದಂತೆ ಈ ಸಿಮರೋಬ ಬೀಜಗಳನ್ನ ಬಯೋಡಿಸೇಲ್ ತಯಾರಿಕೆಗೆ ಬಳಸ್ತಾರೆ. ಈ ಸಿಮರೋಬ ಬೀಜದಲ್ಲಿ ಶೇ.55 ರಿಂದ 65ರಷ್ಟು ಆಯಿಲ್ ಕಂಟೆಂಟ್ ಇರೋದ್ರಿಂದ ಇದಕ್ಕೆ ಭಾರೀ ಡಿಮ್ಯಾಂಡ್ ಇದೆ.
Advertisement
Advertisement
ಆದ್ರೆ, ಈ ಸಿಮರೋಬ ಬೀಜವನ್ನ ಸಿಪ್ಪೆಯಿಂದ ಬೇರ್ಪಡಿಸೋದು ಕಷ್ಟವಾಗಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿದ ದಾವಣಗೆರೆಯ ಜೈನ್ ತಾಂತ್ರಿಕ ವಿದ್ಯಾಲಯದ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕಿರಣ್, ವಿನಯ್, ಸುಮನ್, ವಾಸೀಮ್ ಹೊಸ ಯಂತ್ರ ಅನ್ವೇಷಣೆ ಮಾಡಿದ್ದಾರೆ.
Advertisement
ಈ ವಿದ್ಯಾರ್ಥಿಗಳಿಗೆ ಕೆ.ಎಸ್.ಸಿ.ಎಸ್.ಟಿ ಸಹಕಾರ ಮತ್ತು ಕಾಲೇಜು ಪ್ರಾಧ್ಯಾಪಕರು ಮಾರ್ಗದರ್ಶನ ನೀಡಿದ್ದಾರೆ. ಈ ಯಂತ್ರ ಈಗಾಗಲೇ ಅಂತರ್ ಕಾಲೇಜು ಮತ್ತ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪ್ರದರ್ಶನಗೊಂಡಿದೆ.
Advertisement
ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅನ್ವೇಷಣೆಗೆ ಮತ್ತಷ್ಟು ಪ್ರಚಾರ, ಪ್ರೋತ್ಸಾಹ ಸಿಗಬೇಕಿದೆ.