Connect with us

Dharwad

ಮರಗಳನ್ನು ಸ್ಥಳಾಂತರಿಸಿ ಪರಿಸರ ಕಾಳಜಿ- ಕೆರೆಗೂ ಕಾಯಕಲ್ಪ ನೀಡ್ತಿದ್ದಾರೆ ಧಾರವಾಡದ ಅಸ್ಲಂ ಜಹಾನ್

Published

on

-ಪಕ್ಷಿ ಸಂಕುಲ ರಕ್ಷಣೆಗೆ ವಿಶೇಷ ಮುತುವರ್ಜಿ

ಧಾರವಾಡ: ಸಸ್ಯ ಹಾಗೂ ಪಕ್ಷಿ ಸಂಕುಲ ರಕ್ಷಣೆಗೆ ಪಣತೊಟ್ಟಿರುವ ಧಾರವಾಡ ಹೊರವಲಯದ ಆಂಜನೇಯ ನಗರದ ಅಸ್ಲಂಜಹಾನ್ ಅಬ್ಬಿಹಾಳ ಇವತ್ತಿನ ಪಬ್ಲಿಕ್ ಹೀರೋ.

ವೃತ್ತಿಯಲ್ಲಿ ಪೇಂಟಿಂಗ್ ಕಾಂಟ್ರ್ಯಾಕ್ಟರ್ ಆಗಿರೋ ಅಸ್ಲಂ ಜಹಾನ್ ಪರಿಸರ ಪ್ರೇಮಿ. ಪಕ್ಷಿಗಳು ಎಂದರೆ ಅತೀ ಪ್ರೀತಿ. ಕೆರೆ ಪಕ್ಕ ಕಸ ತೆಗೆಯುವಾಗ ಪಕ್ಷಿಗಳು ಮರಿ ಮಾಡಲು ತೊಂದರೆಯಾಗುವುದನ್ನ ಗಮನಿಸಿ, ಏಳು ನಡುಗಡ್ಡೆಯನ್ನ ನಿರ್ಮಾಣ ಮಾಡಿದ್ದಾರೆ. ಈ ನಡುಗಡ್ಡೆಗಳ ಮೇಲೆ 200ಕ್ಕೂ ಹೆಚ್ಚು ಜಾಲಿ, ಅರಳಿ, ಬೇವು ಹಾಗೂ ಇನ್ನಿತರ ಸಸಿಗಳನ್ನ ನೆಟ್ಟಿದ್ದಾರೆ. ಇದರ ಜೊತೆಗೆ ರಸ್ತೆ ಅಗಲೀಕರಣಕ್ಕೆ ಬಲಿಯಾಗುತ್ತಿದ್ದ ಮರಗಳನ್ನ ಇದೇ ಕೆರೆಗೆ ತಂದು ಬೆಳೆಸುತ್ತಿದ್ದಾರೆ.

ಕಳೆದ 15 ವರ್ಷಗಳಿಂದ ಮರಗಳನ್ನ ಶಿಫ್ಟಿಂಗ್ ಮಾಡಿರುವ ಇವರು, ಮರ ಕಡಿದರೆ ಆ ಮರ ಬೆಳೆಸಲು 30 ವರ್ಷಗಳು ಬೇಕು. ಅದರ ಬದಲಿಗೆ ಆ ಮರವನ್ನ ಸ್ಥಳಾಂತರಿಸಿ ಬೆಳೆಸಬಹುದು ಅನ್ನೋದು ಅಸ್ಲಂ ಅವರ ಮಾತು. ಅಸ್ಲಂ ಅವರ ಈ ಕಾರ್ಯ ಸುತ್ತಮುತ್ತಲ ಗ್ರಾಮಗಳಲ್ಲೂ ಸುದ್ದಿಯಾಗಿದೆ. ಪಕ್ಷಿಗಳನ್ನ ಉಳಿಸಿ ಬೆಳೆಸುವುದರ ಜೊತೆಗೆ ಮರಗಳ ರಕ್ಷಕರೂ ಆಗಿರುವ ಆಂಜನೇಯ ನಗರದ ಅಸ್ಲಂ ಕಾರ್ಯ ಶ್ಲಾಘನೀಯ.

https://www.youtube.com/watch?v=J5ZEILMnN8o

Click to comment

Leave a Reply

Your email address will not be published. Required fields are marked *