ಕಾರವಾರ: ಇವತ್ತಿನ ಪಬ್ಲಿಕ್‍ಹೀರೋ ಕಾರವಾರದ ಒಂದು ತಂಡ. ಮನುಷ್ಯರ ಸಹಾಯಕ್ಕೆ ಬರೋಕೇ ಜನ ಹಿಂದೇಟು ಹಾಕೋ ಈ ಕಾಲದಲ್ಲಿ ಪ್ರಾಣವನ್ನೂ ಲೆಕ್ಕಿಸದೆ ಈ ತಂಡ ವನ್ಯಜೀವಿಗಳ ರಕ್ಷಣೆ ಮಾಡ್ತಿದೆ.
Advertisement
ನಗರೀಕರಣದಿಂದಾಗಿ ಕಾಡುಪ್ರಾಣಿಗಳು ನಾಡಿಗೆ ಬಂದು ತೊಂದರೆಗೆ ಸಿಲುಕಿಕೊಳ್ಳೋದನ್ನ ನೋಡಿದ್ದೇವೆ. ಹೀಗೆ ಬಂದ ವನ್ಯಜೀವಿಗಳು ಕೆಲವೊಮ್ಮೆ ತೊಂದರೆಯಲ್ಲಿ ಸಿಲುಕಿಕೊಳ್ತವೆ. ಈ ರೀತಿ ಆಪತ್ತಿನಲ್ಲಿ ಸಿಲುಕಿದ ಪ್ರಾಣಿಗಳ ರಕ್ಷಣೆಗೆ ಜನ ಹಿಂದೇಟು ಹಾಕ್ತಾರೆ. ಆದ್ರೆ ಇಂತಹ ವನ್ಯಜೀವಿಗಳ ರಕ್ಷಣೆಗಾಗಿಯೇ ಒಂಭತ್ತು ಜನರ ತಂಡವೊಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
Advertisement
Advertisement
ವನ್ಯಜೀವಿಗಳ ಮೇಲಿನ ಕಾಳಜಿಯಿಂದ ರಚನೆಯಾಗಿರೋ ಈ ತಂಡ ಮನುಷ್ಯರಿಗೆ ಕಾಟ ಕೊಡುವ ಹಾಗೂ ಆಪತ್ತಿನಲ್ಲಿ ಸಿಲುಕಿಕೊಳ್ಳುವ ಮಂಗ, ಹಂದಿ, ಹಾವಿನ ಜೊತೆಗೆ ಚಿರತೆಗಳನ್ನೂ ರಕ್ಷಿಸ್ತಿದೆ. ಪ್ರಾಣಿಗಳ ರಕ್ಷಣೆ ವೇಳೆ ಹಲವು ಬಾರಿ ಇವರ ಮೇಲೆ ದಾಳಿಯೂ ನಡೆದಿದೆ.
Advertisement
ಸ್ವಂತ ಖರ್ಚಿನಲ್ಲಿ ಪ್ರಾಣಿಗಳ ರಕ್ಷಣೆಗೆ ಬೇಕಾದ ಪರಿಕರ ಖರೀದಿಸಿರೋ ಈ ತಂಡದಲ್ಲಿ ಕೃಷಿಕರು, ಉದ್ಯೋಗಿಗಳು, ವಿದ್ಯಾರ್ಥಿ, ಅರಣ್ಯಾಧಿಕಾರಿಗಳು ಇದ್ದಾರೆ. ನಿಸ್ವಾರ್ಥವಾಗಿ ವನ್ಯಜೀವಿಗಳ ರಕ್ಷಣೆಗೆ ನಿಂತಿರೋ ಈ ತಂಡ ಶಿಬಿರಗಳ ಮೂಲಕ ಜನರಲ್ಲಿ ಜಾಗೃತಿಯನ್ನೂ ಮೂಡಿಸ್ತಿದೆ.