Connect with us

Districts

ಜಮೀನಿನಲ್ಲೇ ಹೊಂಡ ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸ್ತಿರೋ ಹಾವೇರಿಯ ರೈತ ಅಶೋಕ್

Published

on

Share this

ಹಾವೇರಿ: ಭೀಕರ ಬರಗಾಲದಿಂದ ರಾಜ್ಯದ ಜನ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಆದ್ರೆ ಹಾವೇರಿಯ ರೈತರೊಬ್ಬರು ಜಮೀನಲ್ಲಿಯೇ ಹೊಂಡ ನಿರ್ಮಿಸಿ ಪ್ರಾಣಿ, ಪಕ್ಷಿಗಳ ನೀರಿನ ದಾಹ ನೀಗಿಸ್ತಿದ್ದಾರೆ. ನೀರಷ್ಟೇ ಅಲ್ಲ ಅವುಗಳಿಗೆ ಕಾಳು-ಕಡ್ಡಿ ಹಾಕಿ ಪೋಷಿಸುತ್ತಿದ್ದಾರೆ ಹಾವೇರಿಯ ಈ ನಮ್ಮ ಪಬ್ಲಿಕ್ ಹೀರೋ.

ಹಾವೇರಿ ಜಿಲ್ಲೆ ಶಿಗ್ಗಾಂವಿಯ ರೈತ ಅಶೋಕ್ ಸಹದೇವಪ್ಪ ಕಬನೂರು, ಜಮೀನಿನಲ್ಲಿ ಸಣ್ಣದೊಂದು ಹೊಂಡ ಮಾಡಿ ಟ್ರ್ಯಾಕ್ಟರ್ ಮೂಲಕ ನೀರು ತಂದು ತುಂಬಿಸುತ್ತಾರೆ. ಕಾಡು ಪ್ರಾಣಿ, ಪಕ್ಷಿಗಳಿಗಷ್ಟೇ ಅಲ್ಲ ನಾಡಿನ ಪ್ರಾಣಿಗಳೂ ಇಲ್ಲಿಗೆ ಬಂದು ಈ ಬರಗಾಲದಲ್ಲಿ ನೀರಿನ ದಾಹವನ್ನೂ ನೀಗಿಸಿಕೊಳ್ಳುತ್ತಿವೆ.

ಅಶೋಕ್ ಕಳೆದ 2 ತಿಂಗಳಿನಿಂದ ಹೀಗೆ ಕಾಡು ಪ್ರಾಣಿಗಳು, ಪಕ್ಷಿಗಳು ಹಾಗೂ ಜಾನುವಾರುಗಳು ಪಾಲಿನ ಭಗೀರಥ ಆಗಿದ್ದಾರೆ. ಜಿಂಕೆ, ನವಿಲು ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಈ ಹುಣಸೆ ಮರದ ಬಳಿ ಬಂದು ಅಶೋಕ್ ಅವರು ಹಾಕಿದ ಅಕ್ಕಿ, ನವಣೆ, ಜೋಳ ಸೇರಿದಂತೆ ಕಾಳು-ಕಡ್ಡಿ ತಿಂದು ನೀರು ಕುಡಿದು ನೆಮ್ಮದಿಯಿಂದ ಹಾರುತ್ತವೆ.

ಅಶೋಕ್ ಅವರ ಈ ಸೇವೆಗೆ ಕುರಿಗಾಯಿಗಳು ಸಂತಸ ಪಡುತ್ತಾರೆ. ಕಾಡು ಪ್ರಾಣಿಗಳು ನೀರಿಗಾಗಿ ನಾಡಿಗೆ ನುಗ್ಗಿ ನಾಯಿಗಳ ದಾಳಿಗೆ ಬಲಿಯಾಗೋದನ್ನ ನಾವು ನೋಡಿದ್ದೇವೆ. ಆದರೆ ಅಶೋಕ್ ಅವರಂಥ ಸೇವಕರಿದ್ರೆ ಕಾಡುಪ್ರಾಣಿ, ಪಕ್ಷಿಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ.

https://www.youtube.com/watch?v=bOuOp84pZWc

Click to comment

Leave a Reply

Your email address will not be published. Required fields are marked *

Advertisement