ಚಿಕ್ಕಬಳ್ಳಾಪುರ: ವಿಶೇಷಚೇತನ ಹಾಗೂ ಬುದ್ಧಿಮಾಂದ್ಯರನ್ನ ಮಕ್ಕಳಿಗಾಗಿಯೇ ಚಿಕ್ಕಬಳ್ಳಾಪುರದ ಅಮೃತವಲ್ಲಿ ಟೀಚರ್ `ಆಧಾರ’ ಅನ್ನೋ ಶಾಲೆ ತೆರೆದು ಶಿಕ್ಷಣ ನೀಡ್ತಿದ್ದಾರೆ.
ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ನಿವಾಸಿಯಾಗಿರೋ ಅಮೃತವಲ್ಲಿ 65 ವರ್ಷದ ಇಳಿವಯಸ್ಸಲ್ಲೂ ಬುದ್ಧಿಮಾಂದ್ಯ ಮಕ್ಕಳ ಏಳಿಗೆಗೆ ಶ್ರಮಿಸುತ್ತಿದ್ದಾರೆ. ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಓದಿ ಸಂಶೋಧನೆ ವೇಳೆ ಅವಘಡ ಸಂಭವಿಸಿ ದೃಷ್ಟಿದೋಷಕ್ಕೀಡಾಗಿದರು. ಇದಾದ ನಂತರ ಮದುವೆ ಮುಂದೂಡಿ ಖಾಸಗಿ ಶಾಲೆಯಲ್ಲಿ 2 ದಶಕಗಳ ಕಾಲ ವಿಜ್ಞಾನ, ಇಂಗ್ಲೀಷ್ ಬೋಧಿಸಿದರು.
Advertisement
Advertisement
ದೃಷ್ಟಿದೋಷ 45ನೇ ವಯಸ್ಸಿನಲ್ಲಿ ಅಧಿಕವಾಗಿ ಕಾಡಿತು. ಶಿಕ್ಷಕ ವೃತ್ತಿ ಬಿಟ್ಟು ಮನೆಯಲ್ಲೇ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಆರಂಭಿಸಿದ್ರು. ಬಿಡುವಿನ ವೇಳೆ ಆತ್ಮವಿಕಸನ ಅನ್ನೋ ಯೋಗ ತರಬೇತಿಗೆ ಸೇರಿದ್ರು. ಆಚಾರ್ಯ ವಿನಯ್ ಗೂರೂಜಿಗಳ ಮಾತಿನಿಂದ ಪ್ರೇರಣೆಯಾಗಿ ಬುದ್ಧಿಮಾಂದ್ಯ ಮಕ್ಕಳ ಸೇವೆಗೆ ಮುಂದಾದರು.
Advertisement
2006ರಲ್ಲಿ ಬುದ್ದಿಮಾಂದ್ಯ ಮಕ್ಕಳಿಗೆ ಶಾಲೆ ಆರಂಭಿಸುವ ಯೋಚನೆ ಬಂದಾಗ ಯೋಗ ತರಬೇತಿಗೆ ಮದ್ದಿರೆಡ್ಡಿ, ಬಾಬುರೆಡ್ಡಿ, ರಾಜಶೇಖರರೆಡ್ಡಿ ಸಾಥ್ ನೀಡಿದ್ರು. `ವಿ ಫೀಲ್’ ಅನ್ನೋ ಟ್ರಸ್ಟ್ ಸ್ಥಾಪಿಸಿ, ಟ್ರಸ್ಟ್ ಸದಸ್ಯರೊಬ್ಬರ ರೇಷ್ಮೆ ನೂಲು ಕಾರ್ಖಾನೆಯಲ್ಲಿ `ಆಧಾರ’ ಶಾಲೆ ಆರಂಭಿಸಿದ್ರು. ವಿದ್ಯಾರ್ಥಿಗಳು, ಸಾರ್ವಜನಿಕರಿಂದ ದೇಣಿಗೆ ಪಡೆದು ಸದ್ಯ ಸ್ವಂತ ಕಟ್ಟಡ ತಲೆ ಎತ್ತಿದೆ. ಶಾಲೆಯಲ್ಲಿ 35 ರಿಂದ 40 ಬುದ್ಧಿಮಾಂದ್ಯ ಮಕ್ಕಳಿಗೆ ಯೋಗ, ನೃತ್ಯ, ಹಾಡು, ಕ್ರೀಡೆ ಸೇರಿದಂತೆ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಹೊಸ ಪ್ರಪಂಚವನ್ನ ಪರಿಚಯಿಸುತ್ತಿದ್ದಾರೆ ಎಂದು ವಿ ಫೀಲ್ ಸಂಸ್ಥೆ ಸದಸ್ಯ ಮದ್ದಿರೆಡ್ಡಿ ತಿಳಿಸಿದ್ದಾರೆ.
Advertisement
ಆಧುನಿಕ ಯುಗದ ಮದರ್ ಥೇರೆಸಾರಂತೆ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳು ಹಾಗೂ ಮನೆಯಲ್ಲಿ 90 ವರ್ಷದ ತಾಯಿ ಸೇವೆಯನ್ನೂ ಮಾಡ್ತಿರೋ ಅಮೃತವಲ್ಲಿಯವರು ಪಿಎಚ್‍ಡಿಯನ್ನೂ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv