ಬೆಂಗಳೂರು: ಕೈಕಾಲು ನೆಟ್ಟಗಿದ್ರೂ ಕೆಲವು ಮಂದಿ ದುಡಿದು ತಿನ್ನೋಕೆ ಆಗದೆ ಮಾಡಬಾರದ ಕೆಲಸ ಮಾಡ್ತಾರೆ. ಆದ್ರೆ, ಕುಬ್ಜತೆಗೆ ಒಳಗಾಗಿರೋ ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಅಕ್ಬರ್ ಸ್ವಾಭಿಮಾನದ ಜೀವನ ನಡೆಸ್ತಿದ್ದಾರೆ.
ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಆಟೋ ಓಡಿಸಿ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ ಅಕ್ಬರ್. ಇವರು ಮೂಲತಃ ತಮಿಳುನಾಡಿನವರು. 10 ವರ್ಷಗಳಿಂದ ಹೊಸರೋಡಿನಲ್ಲಿ ನೆಲೆಸಿದ್ದಾರೆ. 7 ವರ್ಷಗಳ ಹಿಂದೆ ಅಪ್ಪ ನಿಧನರಾದ ಮೇಲೆ ಅಕ್ಬರ್ ತಾನೇ ದುಡಿಯಬೇಕಾಯಿತು. ಹುಟ್ಟಿನಿಂದಲೂ ಕುಬ್ಜತೆಗೆ ಒಳಗಾಗಿರುವ 31 ವರ್ಷದ ಅಕ್ಬರ್ 3 ಅಡಿ ಎತ್ತರ ಇದ್ದಾರೆ. ಆದರೆ, ಜೀವನೋತ್ಸಾಹ ಮಾತ್ರ ನೂರ್ಮಡಿಯಾಗಿದೆ.
Advertisement
Advertisement
ಸಾಲ ಮಾಡಿ ಸೆಕೆಂಡ್ ಹ್ಯಾಂಡ್ ಆಟೋ ಖರೀದಿಸಿ ಬಾಡಿಗೆಗೆ ಬಿಟ್ಟು ಅದರಿಂದ ಬರೋ ಹಣವನ್ನು ಜೀವನೋಪಾಯಕ್ಕೆ ಬಳಸೋಣ ಅಂತ ಯೋಜಿಸಿದ್ದರು. ಆದರೆ, ಆಸಾಮಿಯೋರ್ವ ಆಟೋ ಪಡೆದರೂ ಬಾಡಿಗೆ ಹಣ ಕೊಡದೆ ಎಸ್ಕೇಪ್ ಆದ. ಆಗ ಎಚ್ಚೆತ್ತ ಅಕ್ಬರ್ ನಾನೇ ಏಕೆ ಆಟೋ ಓಡಿಸಬಾರದು ಅಂತ ಬ್ರೇಕ್ ಆಲ್ಟ್ರೇಷನ್ ಮಾಡಿಸಿಕೊಂಡು ಆಟೋ ಓಡಿಸ್ತಿರೋದಾಗಿ ಅಕ್ಬರ್ ಹೇಳಿದ್ದಾರೆ.
Advertisement
ಓಡಾಡಲೂ ಕಷ್ಟ ಆಗಿರೋದ್ರಿಂದ ಮನೆಯವರು, ಸ್ನೇಹಿತರ ಸಹಾಯದಿಂದ ಆಟೋ ಓಡಿಸ್ತಿದ್ದಾರೆ. ಕೆಲವು ಪ್ರಯಾಣಿಕರು ಅಕ್ಬರ್ ಆಟೋವನ್ನೇ ಹುಡುಕಿ ಬರ್ತಾರೆ. ಆದರೆ, ಕರುಣೆ ತೋರಿಸಿ ಹೆಚ್ಚಿಗೆ ಹಣ ಕೊಟ್ರೆ ಬಿಲ್‍ಗಿಂತ ಹೆಚ್ಚಿಗೆ ನಯಾಪೈಸೆಯನ್ನು ಸುತರಾಂ ಸ್ವೀಕರಿಸಲ್ಲ. ಅಕ್ಬರ್ ಸ್ವಾಭಿಮಾನ ನೋಡಿ ಇಲ್ಲಿನ ಆಟೋಚಾಲಕರೂ ಭೇಷ್ ಅಂತಿದ್ದಾರೆ.
Advertisement
ಅಕ್ಬರ್ ಆಟೋಗೆ ಪ್ರಯಾಣಿಕರು ತಾವಾಗೇ ಬಂದರೂ ಪೊಲೀಸರು ಅಡ್ಡಿ ಪಡಿಸ್ತಿದ್ದಾರೆ. ನಿನಗೆ ನಿನ್ನ ಮೇಲೆಯೇ ನಂಬಿಕೆ ಇಲ್ಲ. ಪ್ರಯಾಣಿಕರನ್ನು ಹೇಗೆ ಕರ್ಕೊಂಡು ಹೋಗ್ತೀಯಾ ಅಂತ ದಬಾಯಿಸ್ತಿದ್ದಾರೆ. ಇದಕ್ಕೆ ತನ್ನ ಕೆಲಸದ ಮೂಲಕವೇ ಅಕ್ಬರ್ ಉತ್ತರ ಕೊಡ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv