ಮೈಸೂರು: ಸಾಮಾಜಿಕ ಜಾಲತಾಣಗಳು ಸಮಯ ಹಾಳು ಅಂತ ಹೇಳೋರೆ ಹೆಚ್ಚು. ಈ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಪ್ ಗ್ರೂಪ್‍ನಿಂದ 500ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವಂತೆ ಮಾಡಿದ್ದಾರೆ. ಈ ರೀತಿ ಉದ್ಯೋಗ ನೀಡುತ್ತಿರುವ ಮೈಸೂರಿನ ಅಚ್ಯುತಾನಂದ ಬಾಬು ಇವತ್ತಿನ ಪಬ್ಲಿಕ್ ಹೀರೋ.
ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ ಅಚ್ಯುತಾನಂದ ಬಾಬು. ಖಾಸಗಿ ಕಂಪನಿಯಲ್ಲಿ ಎಚ್‍ಆರ್ ಆಗಿರುವ ಇವರು ‘ಉದ್ಯೋಗ ನಿಮಿತ್ತಂ’ ಅನ್ನೋ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. 300ಕ್ಕೂ ಹೆಚ್ಚು ಕಂಪನಿಗಳ ಎಚ್‍ಆರ್‍ಗಳನ್ನು ಈ ಗ್ರೂಪ್‍ಗಳಲ್ಲಿ ಸೇರಿಸಿದ್ದಾರೆ. ಈ ಎಚ್‍ಆರ್ ಗಳೆಲ್ಲಾ ತಮ್ಮ ಕಂಪನಿಗೆ ಅಗತ್ಯವಿರುವ ಉದ್ಯೋಗಗಳ ಬಗ್ಗೆ ಈ ಗ್ರೂಪ್‍ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ. ಈ ಮಾಹಿತಿಯನ್ನು ಅಚ್ಯುತಾನಂದ ಅವರು ಉದ್ಯೋಗ ಆಕಾಂಕ್ಷಿಗಳ ಗ್ರೂಪ್‍ಗೆ ರವಾನಿಸುತ್ತಾರೆ.
Advertisement
Advertisement
Advertisement
ಉದ್ಯೋಗ ಬೇಕಾಗಿರುವ 25ಕ್ಕೂ ಹೆಚ್ಚು ಗ್ರೂಪ್‍ಗಳಲ್ಲಿ 5 ಸಾವಿರಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳಿದ್ದಾರೆ. ಈವರೆಗೆ 500ಕ್ಕೂ ಹೆಚ್ಚು ಜನ ಈ ಗ್ರೂಪ್‍ಗಳಲ್ಲಿನ ಮಾಹಿತಿಯಿಂದ ಉದ್ಯೋಗ ಪಡೆದುಕೊಂಡಿದ್ದಾರೆ.
Advertisement
ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆ, ಶುಭಾಶಯಗಳ ವಿನಿಮಯ, ಸಮಾಜದ ಸ್ವಾಸ್ಥ್ಯ ಕೆಡಿಸುವ ಮೆಸೇಜ್‍ಗಳಿಗೆ ಸೀಮಿತವಾಗದೆ ಈ ರೀತಿಯಾಗಿ ಜನೋಪಕಾರಿ ಕಾರ್ಯಕ್ಕೂ ಬಳಸಿಕೊಳ್ಳಬಹುದು ಅನ್ನೋದನ್ನು ತೋರಿಸಿರೋ ಅಚ್ಯುತಾನಂದ ಬಾಬು ಮಾದರಿಯಾಗಿದ್ದಾರೆ.