– ದಿನಕ್ಕೆ ನೂರಾರು ದೂರು ದಾಖಲು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರು ನಿಯಮ ಉಲ್ಲಂಘನೆ ತಡೆಗೆ ಟ್ರಾಫಿಕ್ ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದರು. ಇದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ನಿತ್ಯ ನೂರಾರು ದೂರುಗಳು ಬರುತ್ತಿವೆ.
ನಿಯಮ ಉಲ್ಲಂಘನೆ ಮಾಡುವ ಕುರಿತು ಸಾರ್ವಜನಿಕರೇ ಫೋಟೋ ಸಮೇತ ದೂರು ನೀಡುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಪರಿಚಯಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Advertisement
Advertisement
ಟ್ರಾಫಿಕ್ ಪೊಲೀಸರು ಹದ್ದಿನ ಕಣ್ಣಿಟ್ಟು ನಿಯಮ ಉಲ್ಲಂಘನೆ ಮಾಡುವವರ ಮೇಲೆ ದಂಡ ವಿಧಿಸುತ್ತಿದ್ದಾರೆ. ಅದೇ ರೀತಿ ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿದಾಗ ಪೊಲೀಸರಿಗೆ ಸಹಾಯವಾಗುವಂತೆ ಪಬ್ಲಿಕ್ ಕೂಡ ನಿಯಮ ಉಲ್ಲಂಘನೆ ಮಾಡುವವರ ಫೋಟೋ ಕ್ಲಿಕ್ಕಿಸಿ ದೂರು ನೀಡಲು ಪಬ್ಲಿಕ್ ಐ ಆ್ಯಪ್ ಬಿಡುಗಡೆ ಮಾಡಿದ್ದರು. ಸದ್ಯ ಈ ಆ್ಯಪ್ ಮೂಲಕ ಸಿಲಿಕಾನ್ ಸಿಟಿಯಲ್ಲಿ ದಿನಕ್ಕೆ 417 ದೂರುಗಳು ದಾಖಲಾಗುತ್ತಿವೆ. ಅಂದರೆ ವರ್ಷಕ್ಕೆ 1.5 ಲಕ್ಷ ದೂರುಗಳು ದಾಖಲು ಆಗಿವೆ.
Advertisement
ಅತೀ ಹೆಚ್ಚಾಗಿ ರೂಲ್ಸ್ ಬ್ರೇಕ್ ಮಾಡುವವರ ಫೋಟೋ, ನೋ ಪಾರ್ಕಿಂಗ್, ದೋಷಯುಕ್ತ ನಂಬರ್ ಪ್ಲೇಟ್, ಒನ್ ವೇಯಲ್ಲಿ ನುಗ್ಗುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ತ್ರಿಬಲ್ ರೈಡಿಂಗ್ ಈ ರೀತಿಯ ದೂರುಗಳು ದಾಖಲಾಗಿವೆ.
Advertisement
ಈ ದೂರುಗಳು ನಗರದ ಸಂಚಾರ ನಿರ್ವಹಣೆಗೆ ಸೇರುತ್ತಿದ್ದು, ತಪ್ಪಿತಸ್ಥರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. 2015ರಲ್ಲಿ ಈ ಆ್ಯಪ್ ಜಾರಿಗೆ ತರಲಾಗಿದೆ. ಇದನ್ನು 1.26 ಲಕ್ಷ ಜನ ಡೌನ್ಲೋಡ್ ಮಾಡಿದ್ದು, 24 ಸಾವಿರ ಜನ ಸಕ್ರಿಯರಾಗಿದ್ದಾರೆ. ಆರಂಭದಿಂದ ಇಲ್ಲಿಯವರೆಗೂ 3.28 ಲಕ್ಷ ದೂರು ದಾಖಲಾಗಿದ್ದು, ದೂರಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅದೇ ರೀತಿ ದಂಡ ಸಹ ಬೀಳುತ್ತಿದೆ.