– ಬೆಳಗಾವಿಯಲ್ಲಿ ಯತ್ನಾಳ್ & ಟೀಮ್ ವಕ್ಫ್ ವಿರುದ್ಧ ಜನಜಾಗೃತಿ ಸಮಾವೇಶ
ಬೆಳಗಾವಿ: ಬೀದರ್ ಬಳಿಕ ಬೆಳಗಾವಿಯಲ್ಲೂ (Belagavi) ರೆಬಲ್ ನಾಯಕರು ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು, ವಕ್ಫ್ ಬೋರ್ಡ್ ವಿರುದ್ಧ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದಾರೆ.
ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ (BJP) ರೆಬಲ್ ನಾಯಕರ ಬೃಹತ್ ಹೋರಾಟ ಹಮ್ಮಿಕೊಂಡಿದ್ದು ವಕ್ಫ್ ಬೋರ್ಡ್ (Waqf Board) ಭೂಕಬಳಿಕೆ ವಿರುದ್ಧ ಬೃಹತ್ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ Basanagouda Patil Yatnal), ಮಾಜಿ ಸಚಿವ ರಮೇಶ್ ನೇತೃತ್ವದಲ್ಲಿ ನಡೆಯುತ್ತಿರುವ ವಕ್ಫ್ ವಿರುದ್ಧ ಹೋರಾಟ ನಡೆಯುತ್ತಿದೆ. ಇದನ್ನೂ ಓದಿ: Bengaluru| ಸಿಲಿಂಡರ್ ಸ್ಫೋಟಗೊಂಡು 3 ಮನೆಗಳಿಗೆ ಬೆಂಕಿ – ಒಂದೇ ಕುಟುಂಬದ ನಾಲ್ವರಿಗೆ ಗಾಯ
Advertisement
Advertisement
ಬೀದರ್ ಬಳಿಕ ಬೆಳಗಾವಿಯಲ್ಲೂ ವಕ್ಫ್ ಬೋರ್ಡ್ ವಿರುದ್ಧ ಹೋರಾಟಕ್ಕೆ ರೆಬಲ್ಸ್ ನಾಯಕರು ಅಣಿಯಾಗಿದ್ದು ಬೆಳಗಾವಿ ಚೆನ್ನಮ್ಮ ವೃತ್ತದಿಂದ ಹೋರಾಟ ಶುರುವಾಗಲಿದೆ. ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬಳಿಕ ಬೆಳಿಗ್ಗೆ 10.30ಕ್ಕೆ ಸಮಾವೇಶದ ಸ್ಥಳ ಗಾಂಧಿ ಭವನದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ (Pratap Simha), ಜಿಎಂ ಸಿದ್ದೇಶ್ವರ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಬಿ.ಪಿ ಹರೀಶ, ಎನ್.ಆರ್ ಸಂತೋಷ್ ಸೇರಿ ಹಲವರು ಸಾಥ್ ಕೊಡಲಿದ್ದಾರೆ. ಇದನ್ನೂ ಓದಿ: Cyclone Fengal | ಚಂಡಮಾರುತಕ್ಕೆ ಮೂವರು ಬಲಿ – 100ಕ್ಕೂ ಹೆಚ್ಚು ಮಂದಿ ರಕ್ಷಣೆ
Advertisement
Advertisement
ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಯತ್ನಾಳ್ ವಕ್ಫ್ ಬಗ್ಗೆ ಜಾಗೃತಿ ಮೂಡಿಸಲು ಹೋರಾಟ ಮಾಡುತ್ತಿದ್ದಾರೆ. ವಿಜಯೇಂದ್ರ ಅವರು ನಮ್ಮ ರಾಜಾಧ್ಯಕ್ಷರು, ಅವರು ನ.20ರಂದು ಸುದ್ದಿಗೋಷ್ಠಿ ಮಾಡಲು ಕರೆಕೊಟ್ಟಿದ್ದರು. ಅದರಂತೆ ಎಲ್ಲಾ ಜಿಲ್ಲೆಗಳಲ್ಲಿ ಸುದ್ದಿಗೋಷ್ಠಿ ಮಾಡಿದ್ದೇವೆ. ನ.22ರಂದು ಎಲ್ಲಾ ಜಿಲ್ಲೆಯ ಡಿಸಿ ಕಚೇರಿಗಳಿಗೆ ಮುತ್ತಿಗೆ ಹಾಕಲು ಕರೆಕೊಟ್ಟಿದ್ದರು, ಅದೇ ರೀತಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದೇವೆ. ಅದೇ ರೀತಿ ಯತ್ನಾಲ್ ಅವರು ಬಿಜಾಪುರದಿಂದ ಹೋರಾಟ ಆರಂಭ ಮಾಡಿದ್ದರು. ಆ ಹೋರಾಟದಲ್ಲಿ ಕೇಂದ್ರ ಸಚಿವರು ಭಾಗಿಯಾದ್ರು, ಹೀಗಾಗಿ ಈ ಹೋರಾಟದಲ್ಲಿ ಅಪಸ್ವರ, ಬಣ ಹೋರಾಟ ಎಂಬುದು ಅಪ್ರಸುತ್ತ ಅಗುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಬ್ರಿಟಿಷರ ಆಡಳಿತ ವಿರೋಧಿಸಿದ ಕೀರ್ತಿ ಟಿಪ್ಪುವಿನದ್ದು: ವಿದೇಶಾಂಗ ಸಚಿವ ಜೈಶಂಕರ್
ಯತ್ನಾಳ್ ಸಹ ಜನಪ್ರಿಯ ನಾಯಕರು:
ನಿನ್ನೆ ಸಹ ನಾನು ಹೇಳಿದ್ದೆ ಅಪ್ರಸ್ತುತ ವ್ಯಕ್ತಿಗಳು, ಜನರಿಂದ ತಿರಸ್ಕೃತವಾಗಿದ್ದವರು, ಮೂಲೆ ಗುಂಪಾಗಿದ್ದವರ ಬಗ್ಗೆ ಉತ್ತರ ಕೊಡುವ ಅಗತ್ಯವಿಲ್ಲ. ಹೋರಾಟದ ದಿಕ್ಕು ತಪ್ಪಿಸುವರ ಬಗ್ಗೆ ಮಾತನಾಡುದಿಲ್ಲ. ಇಡೀ ಬಿಜೆಪಿ ವಕ್ಫ್ ವಿರುದ್ಧ ವಿಜಯೇಂದ್ರ-ಯತ್ನಾಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಇದಕ್ಕಾಗಿ ಯಾಕೆ ಅಪಸ್ವರ ಬರುತ್ತಿದೆ ನನಗೆ ಗೋತ್ತಿಲ್ಲ. ಯತ್ನಾಳ್ ಕೂಡ ಜನಪ್ರಿಯ ನಾಯರಾಗಿದ್ದಾರೆ. ಅವರ ನೇತೃತ್ವದಲ್ಲಿ ಹೋರಾಟ ಆರಂಭವಾಗಿದೆ. ವಕ್ಫ್ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಹೇಳಿದ್ದಾರೆ.