ಬನ್ನೇರುಘಟ್ಟ: ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವ ಪ್ರಮುಖ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳದ್ದು. ಆದ್ರೆ ಇಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ಕಲುಷಿತ ನೀರನ್ನು (Contaminated Water) ಮನೆಗಳಿಗೆ ಸರಬರಾಜು ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
Advertisement
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಪನಾಯಕನಹಳ್ಳಿಯಲ್ಲಿ. ಇಲ್ಲಿನ ನಿವಾಸಿಗಳಿಗೆ ವಾರಕ್ಕೊಮ್ಮೆ ಗ್ರಾಮ ಪಂಚಾಯತಿ ನೀರು ಸರಬರಾಜು ಮಾಡುತ್ತಿದೆ. ಆದ್ರೆ ಕಳೆದ 1 ತಿಂಗಳಿನಿಂದ ಸ್ಯಾನಿಟರಿ ಮತ್ತು ಚರಂಡಿ ಮಿಶ್ರೀತ ನೀರು ಸರಬರಾಜು ಮಾಡುತ್ತಿದ್ದಾರೆ. ಕಲುಷಿತ ನೀರು ಸೇವನೆಯಿಂದ ವಾಂತಿಭೇದಿ, ಕೆಮ್ಮು ಜ್ವರ ನೆಗಡಿ ಜೊತೆ ಅಲರ್ಜಿ ಕೂಡ ಕಾಡುತ್ತಿದೆ ಎಂದು ಗ್ರಾಪಂ ವಿರುದ್ಧ ಕಿರಿ ಕಾಡಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ನೀರಿನ ದರ ಏರಿಕೆ ಶಾಕ್ – ಜಲಮಂಡಳಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
Advertisement
Advertisement
ಸಾರ್ವಜನಿಕ ನಲ್ಲಿಗಳಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿರುವ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಕಲುಷಿತ ನೀರು ಸೇವಿಸಿ ಮನೆ ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಂಪ್‌ಗಳನ್ನು ಸ್ವಚ್ಛಗೊಳಿಸಿ ಹಣ ನೀರು ಟ್ಯಾಂಕರ್ ನೀರು ಹೊಡೆಸಿಕೊಳ್ಳುತ್ತಿದ್ದು, ಅದು ಕೂಡ ಕಲುಷಿತ ನೀರು ಸೇರಿ ಗಬ್ಬೆದ್ದು ನಾರುತ್ತಿದೆ. ಚುನಾವಣೆ ಬಂದಾಗ ಮತ ಕೇಳಲು ಬರುವ ರಾಜಕಾರಣಿಗಳು ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇಷ್ಟೆಲ್ಲಾ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದ್ದರೂ ಪಂಚಾಯತಿ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇರಳಕ್ಕೆ ಅನುದಾನ ಬೇಕಿದ್ರೆ ʻ ಹಿಂದುಳಿದ ರಾಜ್ಯʼ ಎಂದು ಘೋಷಿಸಲಿ: ಜಾರ್ಜ್ ಕುರಿಯನ್