ಬೆಂಗಳೂರು: 76ನೇ ಗಣರಾಜ್ಯೋತ್ಸವದ ನಿಮಿತ್ತ ಜನವರಿ 26 ಮತ್ತು 27ರಂದು ರಾಜಭವನಕ್ಕೆ (Raj Bhavan) ಸಾರ್ವಜನಿಕರ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ (R Prabhushankar) ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿದ ಅವರು, ಸಾರ್ವಜನಿಕರು ಮುಖ್ಯದ್ವಾರದ ಮೂಲಕ ಉಚಿತ ಪ್ರವೇಶ ಪಡೆಯಬಹುದಾಗಿದೆ. ರಾಜಭವನ ಪ್ರವೇಶ ಪಡೆಯಲಿಚ್ಚಿಸುವವರು ಆಧಾರ್ ಕಾರ್ಡ್ ಅಥವಾ ಭಾವಚಿತ್ರವಿರುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸತಕ್ಕದ್ದು. ಪ್ರವೇಶದ ಸಮಯ ಸಂಜೆ 6 ರಿಂದ 7:30ವರೆಗೆ ಇರಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ: ಯತ್ನಾಳ್
Advertisement
ಸಾರ್ವಜನಿಕರು ಯಾವುದೇ ರೀತಿಯ ಕ್ಯಾಮೆರಾ, ಕೈ ಚೀಲ, ಚೂಪಾದ ವಸ್ತುಗಳು, ತಿಂಡಿ-ತಿನಿಸು, ಪ್ಲಾಸ್ಟಿಕ್ ವಸ್ತುಗಳು ಇನ್ನಿತರ ಯಾವುದೇ ಲಗೇಜ್ ಬ್ಯಾಗ್ ತರುವಂತಿಲ್ಲ. ರಾಜಭವನದ ಒಳಗಡೆ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಸ್ಟೇರಿಂಗ್ ಕಟ್ ಆಗಿ ಬಸ್ ಪಲ್ಟಿ – ಐವರಿಗೆ ಗಂಭೀರ ಗಾಯ
Advertisement
Advertisement
ಸಾರ್ವಜನಿಕರು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸಿ, ಸಹಕರಿಸಬೇಕಾಗಿ ಕೋರಿದೆ ಎಂದು ಪ್ರಭುಶಂಕರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಐದು ವರ್ಷವೂ ಸಿದ್ದರಾಮಯ್ಯ ಸಿಎಂ: ಜಮೀರ್
Advertisement