ನವದೆಹಲಿ: ಸದ್ಯ ಎಲ್ಲಡೆ ಸುದ್ದಿಯಲ್ಲಿರುವ ಹೆಸರಾಂತ ಗೇಮ್ ಪಬ್‍ಜಿ, ಈ ಯುದ್ಧಭೂಮಿಯ ಗೇಮ್ ಕಂಡುಹಿಡಿದಿರುವ ಕಂಪನಿ ದಿನಕ್ಕೆ ಬರೋಬ್ಬರಿ 20 ಕೋಟಿ ರೂ. ಲಾಭ ಪಡೆಯುತ್ತಿದೆ ಎಂದು ಸೂಪರ್ ಡಾಟಾ ತಿಳಿಸಿದೆ.
ಹೌದು, ಇತ್ತೀಚಿಗೆ ಯುವ ಪೀಳಿಗೆಯವರಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ ಗೇಮ್ ಅಂದ್ರೆ ಪಬ್‍ಜಿ. ಈ ಗೇಮ್ ಆಡುವವರು ಎಷ್ಟು ಲಾಭ ಪಡೆದಿದ್ದಾರೋ ಗೊತ್ತಿಲ್ಲ. ಆದ್ರೆ ಯುವ ಪೀಳಿಗೆ ಪ್ರತಿದಿನ ಈ ಗೇಮ್ ಆಡುತ್ತಿರುವುದರಿಂದ ಕಂಪನಿಗೆ ಮಾತ್ರ ಸಖತ್ತಾಗಿ ಲಾಭವಾಗುತ್ತಿದೆ. ಎಲ್ಲೆಡೆ ಪಬ್‍ಜಿ ಗೇಮ್ ಮೂಡಿಸಿರುವ ಕ್ರೇಜ್‍ನಿಂದ್ ಕಂಪನಿ ಮಾತ್ರ ತನ್ನ ಖಜಾನೆಯನ್ನು ಆರಾಮಾಗಿ ತುಂಬಿಸಿಕೊಳ್ಳುತ್ತಿದೆ ಅಂದರೆ ತಪ್ಪಾಗಲ್ಲ. ಯಾಕೆಂದರೇ ಪಬ್‍ಜಿ ಗೇಮ್ ಕಂಪನಿಗೆ ತಂದು ಕೊಟ್ಟ ಲಾಭ ಅಷ್ಟಿದೆ. ಏನಿಲ್ಲಾ ಅಂದರೂ ಪ್ರತಿ ದಿನ ಪಬ್‍ಜಿ ಗೇಮ್ 20 ಕೋಟಿ ರೂ. ಗಳಿಕೆ ಮಾಡುತ್ತಿದೆ.
Advertisement
Advertisement
ಸೂಪರ್ ಡಾಟಾದ ಪ್ರಕಾರ, 2018ರಲ್ಲಿ ಪಬ್‍ಜಿ ಗೇಮ್ ಕಂಪನಿ ಬರೋಬ್ಬರಿ 7 ಸಾವಿರ ಕೋಟಿ ರೂ. ವಾರ್ಷಿಕ ಆದಾಯ ಗಳಿಸಿತ್ತು. ಅಂದರೆ ದಿನಕ್ಕೆ ಸರಿಸುಮಾರು 20 ಕೋಟಿ ರೂ. ಅಲ್ಲದೆ 2018ರ ನವೆಂಬರ್ ಒಂದೇ ತಿಂಗಳಲ್ಲಿ ಪಬ್‍ಜಿಯಿಂದ ಕಂಪನಿ 32.5 ಮಿಲಿಯಲ್ ಡಾಲರ್(230 ಕೋಟಿ ರೂ.) ಲಾಭ ಗಳಿಸಿತ್ತು. ಅಂದಿನಿಂದ ಪಬ್‍ಜಿ ಕಂಪನಿಗೆ ದಿನಕ್ಕೆ ಕನಿಷ್ಠ 28 ಕೋಟಿ ರೂ. ಆದಾಯ ಬರುತ್ತಿದೆ. ಅಂದರೆ ಪ್ರತಿ ಗಂಟೆಗೆ 1 ಕೋಟಿಗೂ ಅಧಿಕ ಹಣವನ್ನು ಕಂಪನಿ ಸಲೀಸಾಗಿ ಗಳಿಸುತ್ತಿದೆ.
Advertisement
Advertisement
ಏನಿದು ಪಬ್ ಜಿ?
ಪಬ್ ಜಿ ಎನ್ನುವುದು ಒಂದು ಬ್ಯಾಟಲ್ ಫೀಲ್ಡ್ ಗೇಮ್ (ಯುದ್ಧ ಭೂಮಿ ಆಟ). ಈ ಆಟದ ಸಂಪೂರ್ಣ ಭೂಪಟವನ್ನು ಆಟಗಾರಿಗೆ ಮೊದಲು ತೋರಿಸಲಾಗುತ್ತದೆ. ಬಳಿಕ ಆಟಗಾರರು ತಮಗೆ ಬೇಕಾದ ಪ್ರದೇಶವನ್ನು ಆಯ್ದುಕೊಂಡು ಆ ಪ್ರದೇಶಕ್ಕೆ ವಿಮಾನದಿಂದ ಕೆಳಗೆ ಹಾರಿ ಮನೆಗಳತ್ತ ಓಡ್ತಾರೆ. ಆಟಗಾರರಿದ್ದ ಪ್ರದೇಶದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು, ಮೆಡಿಕಲ್ ಕಿಟ್‍ಗಳನ್ನು, ಯುದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದೆ ಸಾಗುತ್ತಾರೆ. ಆಟಗಾರರು ಇಳಿದ ಪ್ರದೇಶದ ಸುತ್ತ ವೃತ್ತವೊಂದು ಸಣ್ಣದಾಗುತ್ತೆ. ಆಗ ಅಲ್ಲಿದ್ದ ನೂರಾರು ಜನರ ಜೊತೆ ಹೋರಾಡಿ ಉಳಿದರೇ ಗೆದ್ದಂತೆ, ಮೃತಪಟ್ಟರೆ ಸೋತಂತೆ. ಈ ಆಟದ ವಿಶೇಷ ಏನೆಂದರೆ ಸ್ನೇಹಿತರ ಜೊತೆ ಸೇರಿ ಆಡಬಹುದು.
ಸದ್ಯ ಗುಜರಾತ್‍ನಲ್ಲಿ ಪಬ್‍ಜಿ ಗೇಮ್ ಬ್ಯಾನ್ ಮಾಡಲಾಗಿದ್ದು, ಅಲ್ಲಿ ಈ ಗೇಮ್ ಆಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಕೂಡ ಪಬ್‍ಜಿ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಈ ಗೇಮ್ ಆಡುವವವರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತಾಗಿ ಕಡಿಮೆಯಾಗುತ್ತಿಲ್ಲ.