ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಗೆ (IOA) ಇದೇ ಮೊದಲ ಬಾರಿ ಮಹಿಳಾ ಅಧ್ಯಕ್ಷರಾಗಿ ಕ್ರೀಡಾ ದಿಗ್ಗಜೆ ಪಿಟಿ ಉಷಾ (PT Usha) ಆಯ್ಕೆಯಾಗಿದ್ದಾರೆ. ಈ ಮೂಲಕ ಉಷಾ ದೇಶದ ಕ್ರೀಡಾ ಆಡಳಿತದಲ್ಲಿ ಹೊಸ ಯುಗಕ್ಕೆ ನಾಂದಿಹಾಡಿದ್ದಾರೆ.
58 ವಯಸ್ಸಿನ ಪಿಟಿ ಉಷಾ ಐಒಎಗೆ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ 95 ವರ್ಷಗಳ ಇತಿಹಾಸದಲ್ಲೇ ಈ ಸ್ಥಾನಕ್ಕೇರಿದ ಮೊದಲ ಒಲಂಪಿಯನ್ ಹಾಗೂ ಅಂತಾರಾಷ್ಟ್ರೀಯ ಪದಕ ವಿಜೇತೆಯಾಗಿದ್ದಾರೆ.
Advertisement
ಪಿಟಿ ಉಷಾಯ ಆಯ್ಕೆಯಿಂದ ಐಒಎಯಲ್ಲಿ ದೀರ್ಘಕಾಲದಿಂದಿದ್ದ ಬಿಕ್ಕಟ್ಟು ಅಂತ್ಯವಾಗಿದೆ. ಇದಕ್ಕೂ ಮೊದಲು ಈ ತಿಂಗಳ ಒಳಗಾಗಿ ಅಧ್ಯಕ್ಷರ ನೇಮಕವಾಗದೇ ಹೋದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನೇ ಅಮಾನತುಗೊಳಿಸುವ ಸಾಧ್ಯತೆಯಿತ್ತು.
Advertisement
Advertisement
ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದ (NRAI) ಅಜಯ್ ಪಟೇಲ್ ಅವರು ಹಿರಿಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಲಿಂಪಿಕ್ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಮತ್ತು ರೋಯಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷೆ ರಾಜಲಕ್ಷ್ಮಿ ಸಿಂಗ್ ದೇವ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Advertisement
ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ (IWF) ಅಧ್ಯಕ್ಷ ಸಹದೇವ್ ಯಾದವ್ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಅಧ್ಯಕ್ಷ ಮತ್ತು ಮಾಜಿ ಗೋಪರ್ ಕಲ್ಯಾಣ್ ಚೌಬೆ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: India vs Bangladesh 3rd ODI – ಭಾರತಕ್ಕೆ 227 ರನ್‌ಗಳ ಭರ್ಜರಿ ಜಯ
ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ (BAI) ಅಲಕಾನಂದ ಅಶೋಕ್ ಅವರು ಶಾಲಿನಿ ಠಾಕೂರ್ ಚಾವ್ಹಾ ಮತ್ತು ಸುಮನ್ ಕೌಶಿಕ್ ಅವರನ್ನು ಹಿಂದಿಕ್ಕಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಮತ್ತು ಬಿಲ್ಲುಗಾರ್ತಿ ಡೋಲಾ ಬ್ಯಾನರ್ಜಿ ಅವರು ಎಕ್ಸಿಕ್ಯೂಟಿವ್ ಕೌನ್ಸಿಲ್‌ನಲ್ಲಿ ಪುರುಷ ಮತ್ತು ಮಹಿಳಾ ಪ್ರತಿನಿಧಿಗಳಾಗಿದ್ದಾರೆ. ಲೆಜೆಂಡರಿ ಬಾಕ್ಸರ್ ಎಂಸಿ ಮೇರಿ ಕೋಮ್ ಮತ್ತು ಹಿರಿಯ ಟೇಬಲ್ ಟೆನ್ನಿಸ್ ಆಟಗಾರ ಅಚಂತಾ ಶರತ್ ಕಮಲ್ ಅವರು ಅಥ್ಲೀಟ್ ಆಯೋಗದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿರುವ ಕಾರಣದಿಂದ ಕಾರ್ಯಕಾರಿ ಮಂಡಳಿಯ ಭಾಗವಾಗಿದ್ದಾರೆ.
ಭೂಪೇಂದರ್ ಸಿಂಗ್ ಬಾಜ್ವಾ, ಅಮಿತಾಭ್ ಶರ್ಮಾ, ಹರ್ಪಾಲ್ ಸಿಂಗ್ ಮತ್ತು ರೋಹಿತ್ ರಾಜ್‌ಪಾಲ್ ಕೂಡ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ವಿಶ್ವನಾಥ್ ಕಾಂಗ್ರೆಸ್ ಸೇರದಂತೆ ಮನವೊಲಿಸಲು ನಾನು ಮುಂದಾಳತ್ವ ವಹಿಸಲ್ಲ: ಹೆಬ್ಬಾರ್