ನವದೆಹಲಿ: ರಾಜ್ಯಸಭೆಯ ಸದಸ್ಯೆಯಾಗಿರುವ ಪಿ.ಟಿ ಉಷಾ ಅವರು, ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಜಗದೀಪ್ ದನಕರ್ ಅವರ ಅನುಪಸ್ಥಿತಿಯಲ್ಲಿ ಗುರುವಾರ ಮೊದಲ ಬಾರಿಗೆ ಕಲಾಪದ ಅಧ್ಯಕ್ಷತೆ ವಹಿಸಿದ್ದರು.
ಈ ಬಗ್ಗೆ ವಿಡಿಯೋ ತುಣುಕೊಂದನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅವರು ಇದೊಂದು ಮೈಲಿಗಲ್ಲು ಎಂದು ಕರೆದುಕೊಂಡಿದ್ದಾರೆ.
Advertisement
ಜುಲೈ 2022ರಲ್ಲಿ ಅವರು ಬಿಜೆಪಿಯಿಂದ ಸದನದ ಮೇಲ್ಮನೆಗೆ ಆಯ್ಕೆಗೊಂಡಿದ್ದರು. ನವೆಂಬರ್‌ನಲ್ಲಿ ಒಲಿಂಪಿಕ್ ಅಸೋಸಿಯೇಷನ್‍ಗೆ ಆಯ್ಕೆಯಾಗಿದ್ದರು.
Advertisement
"Great power involves great responsibility" as said by Franklin D. Roosevelt was felt by me when I chaired the Rajya Sabha session. I hope to create milestones as I undertake this journey with the trust and faith vested in me by my people.
???? @sansad_tv pic.twitter.com/bR8wKlOf21
— P.T. USHA (@PTUshaOfficial) February 9, 2023
Advertisement
ಫ್ರಾಂಕ್ಲಿನ್ ಡಿ. ರೂಸ್‍ವೆಲ್ಟ್ ಅವರ ಹೇಳಿಕೆಯನ್ನು ಉಲ್ಲೇಖಿಸಿ “ದೊಡ್ಡ ಅಧಿಕಾರ ದೊಡ್ಡ ಜವಬ್ದಾರಿಯನ್ನು ಒಳಗೊಂಡಿರುತ್ತದೆ” ಎಂದು ನಾನು ಅಧಿಕಾರ ವಹಿಸಿಕೊಂಡಾಗಲೇ ತಿಳಿದಿತ್ತು. ಜನ ನನ್ನ ಮೇಲಿಟ್ಟ ನಂಬಿಕೆಯಿಂದ ನಾನು ಈ ಸ್ಥಾನಕ್ಕೇರಲು ಸಾಧ್ಯವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಮಾಜ್ ಮಾಡಲು ಮಸೀದಿ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಇದೆ – ಸುಪ್ರೀಂಗೆ ಮುಸ್ಲಿಂ ಬೋರ್ಡ್ ಮಾಹಿತಿ
Advertisement
ನಿಮ್ಮ ಈ ಸಾಧನೆ ತುಂಬಾ ಹೆಮ್ಮೆ ಪಡುವಂತಹ ವಿಚಾರ. ನೀವು ಈ ದೇಶದ ಹೆಣ್ಣುಮಕ್ಕಳಿಗೆ ಸದಾ ಸ್ಫೂರ್ತಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಮತ್ತೊಮ್ಮೆ ಇತಿಹಾಸವನ್ನು ಸೃಷ್ಟಿಸಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ನಿಜವಾದ ಮಹಿಳಾ ಸಬಲೀಕರಣದ ಅರ್ಥ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬಣ್ಣಿಸಿದ್ದಾರೆ.
ಪಿ.ಟಿ ಉಷಾ ಅವರು ಕ್ರೀಡಾ ಕ್ಷೇತ್ರದಲ್ಲಿ ಏಷ್ಯಾ ಹಾಗೂ ಅಂತರಾಷ್ಟ್ರಿಯ ಮಟ್ಟದ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ನಾಲ್ಕು ಬಂಗಾರದ ಹಾಗೂ ಏಳು ಬೆಳ್ಳಿಯ ಪದಕಗಳನ್ನು ಬಾಚಿಕೊಂಡಿದ್ದಾರೆ. 1984ರ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಓಟವನ್ನು 55.42 ಸೆಕೆಂಡ್‍ಗಳಿಗೆ ಓಡಿ ಕೂದಲೆಳೆ ಅಂತರದಲ್ಲಿ ಕಂಚಿನ ಪದಕವನ್ನು ಕಳೆದುಕೊಂಡಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k