ಬೆಂಗಳೂರು: ನಗರದ ಕಬ್ಬನ್ ಪಾರ್ಕ್‍ನಲ್ಲಿ ಸೈಕೋ ವ್ಯಕ್ತಿಯೊಬ್ಬ ಕೈಯಲ್ಲಿ ಕೊಡಲಿ ಹಿಡಿದು ಜನರಲ್ಲಿ ಆತಂಕ ಹುಟ್ಟಿಸಿದ ಘಟನೆ ನಡೆದಿದೆ.
ಒಂದು ಕೈಯಲ್ಲಿ ಕೊಡಲಿ, ಮತ್ತೊಂದು ಕೈಯಲ್ಲಿ ದಪ್ಪ ಕಲ್ಲು ಹಿಡಿದು ಓಡಾಡುತ್ತಿರುವ ವ್ಯಕ್ತಿ ಎದುರಿಗೆ ಬಂದವರನ್ನು ಅಟ್ಟಾಡಿಸಿದ್ದಾನೆ. ಅರೆ ಬರೆ ಬಟ್ಟೆ ತೊಟ್ಟ ಈತ ಇಡೀ ಕಬ್ಬನ್ ಪಾರ್ಕ್‍ನಲ್ಲಿ ಓಡಾಡಿ ಜನರನ್ನು ಬೆಚ್ಚಿಬೀಳಿಸಿದ್ದಾನೆ. ಇವನನ್ನು ನೋಡಿ ಸೆಕ್ಯೂರಿಟಿ ಗಾರ್ಡ್ ಕೂಡ ದಂಗಾಗಿದ್ದಾರೆ.
ಮಾನಸಿಕ ಅಸ್ವಸ್ಥನ ಕೈಯಲ್ಲಿ ಕಲ್ಲು, ಕೊಡಲಿ ನೋಡಿ ಜನ ಗಾಬರಿಯಾಗಿದ್ದಾರೆ. ಅದ್ಯಾರ್ ಬರ್ತಿರೋ ಬನ್ರೋ ಅಂತಾ ಹೇಳಿ ಅಬ್ಬರಿಸಿದ ಮಾನಸಿಕ ಅಸ್ವಸ್ಥ, ಕಬ್ಬನ್ ಪಾರ್ಕ್‍ನಿಂದ ವಿಶ್ವೇಶ್ವರಯ್ಯ ಮ್ಯೂಸಿಯಂನತ್ತ ಓಡಿ ಹೋಗಿದ್ದಾನೆ.
https://www.youtube.com/watch?v=obgqjc7NFr4