ತುಮಕೂರು: ಮಾಮೂಲಿ ನೀಡದ್ದಕ್ಕೆ ಟೀ ಅಂಗಡಿ ಮಾಲೀಕನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ತಿಪಟೂರು ಗ್ರಾಮಾಂತರ ಪಿಎಸ್‍ಐ ನನ್ನು ಅಮಾನತು ಮಾಡಲಾಗಿದೆ.
ದರ್ಪ ತೋರಿದ ಪಿಎಸ್‍ಐ ಶ್ರೀಕಾಂತ್‍ರನ್ನು ಅಮಾನತುಗೊಳಿಸಿ ಎಸ್‍ಪಿ ದಿವ್ಯಾ ಗೋಪಿನಾಥ್ ಆದೇಶಿಸಿದ್ದಾರೆ. ಬಿದರೆಗುಡಿ ಗ್ರಾಮದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ನಾರಾಯಣ ಕುಮಾರ್ ಎಂಬವರ ಬಳಿ ಪಿಎಸ್‍ಐ ಶ್ರೀಕಾಂತ ಲಂಚ ಕೇಳಿದ್ದರು. ಕಳೆದ 15 ವರ್ಷಗಳಿಂದ ನಾರಾಯಣ ಕುಮಾರ್ ರಾತ್ರಿ ವೇಳೆ ಟೀ ಅಂಗಡಿ ನಡೆಸಿಕೊಂಡು ಬಂದಿದ್ದಾರೆ. ಇನ್ಮುಂದೆ ರಾತ್ರಿ ವ್ಯಾಪಾರ ಮಾಡೋದಾದ್ರೆ ತಿಂಗಳಿಗೆ ಐದು ಸಾವಿರ ರೂಪಾಯಿ ಲಂಚ ಕೊಡಬೇಕು ಎಂದು ಪಿಎಸ್‍ಐ ಬೇಡಿಕೆ ಇಟ್ಟಿದ್ರು ಎನ್ನಲಾಗಿದೆ. ಲಂಚ ನೀಡಲು ನಿರಾಕರಿಸಿದಾಗ ಸಿಬ್ಬಂದಿಯೊಂದಿಗೆ ಬಂದು ದರ್ಪ ತೋರಿದ್ದರು.
Advertisement
ಮಾಮೂಲಿ ನೀಡಲು ನಿರಾಕರಿಸಿದ್ದಕ್ಕೆ ಅಂಗಡಿಗೆ ನುಗ್ಗಿ ನಾರಾಯಣ ಅವರನ್ನು ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇವರ ಜೊತೆ ಟೀ ಕುಡಿಯುತ್ತಿದ್ದ ಇಬ್ಬರು ಗ್ರಾಹಕರಿಗೂ ಥಳಿಸಿದ್ದರು. ಈ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರ ಅಗುತ್ತಿದ್ದಂತೆಯೇ ಎಸ್‍ಪಿ ದಿವ್ಯಾ ಗೋಪಿನಾಥ್ ಅವರು ಪಿಎಸ್‍ಐ ಶ್ರೀಕಾಂತ್‍ರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
Advertisement
https://www.youtube.com/watch?v=MZF1PSuVnDA