ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಸೆಲೆಕ್ಷನ್ ಲಿಸ್ಟ್‌ನಲ್ಲಿ ಫಸ್ಟ್ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪಿಎಸ್‌ಐ ನೇಮಕಾತಿ ಪರೀಕ್ಷೆಯ ಆಯ್ಕೆ ಪಟ್ಟಿಯಲ್ಲಿ ಫಸ್ಟ್ ರ‍್ಯಾಂಕ್ ಬಂದಿದ್ದ ಮಾಗಡಿ ತಾಲ್ಲೂಕಿನ ನಿವಾಸಿ ಜೆ.ಕುಶಾಲ್‌ಕುಮಾರ್ ನನ್ನು ಪೊಲೀಸರು ಬಂಧಿಸಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭೆ ಫೈಟ್‍ನಲ್ಲಿ ಟ್ವಿಸ್ಟ್ – ಕಾಂಗ್ರೆಸ್, ಜೆಡಿಎಸ್ ಮಧ್ಯೆ ‘ಆತ್ಮಸಾಕ್ಷಿ’ ಫೈಟ್
Advertisement
Advertisement
ಬಂಧಿತ ಆರೋಪಿ ಪ್ರಮುಖ ರಾಜಕಾರಣಿಯೊಬ್ಬರ ಮಗ ಎನ್ನಲಾಗಿದೆ. ಈತ 200 ಅಂಕಗಳಿಗೆ 168 ಅಂಕ ಪಡೆಯುವ ಮೂಲಕ 545 ಅಭ್ಯರ್ಥಿಗಳ ಆಯ್ಕೆಯಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ. ಈತ ಪ್ರಮುಖ ಆರೋಪಿ ದರ್ಶನ್‌ಗೌಡ ಜೊತೆ ಸ್ನೇಹ ಹೊಂದಿದ್ದ. ಇಂದು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಪಿಎಸ್‌ಐ ನೇಮಕಾತಿ ಪ್ರಕರಣದ ವಿಚಾರಣೆ ವೇಳೆ ಸಚಿವ ಅಶ್ವಥ್ ನಾರಾಯಣ್ ಹಾಗೂ ಅವರ ಸಹೋದರ ಸತೀಶ್ ಹೆಸರು ಹೇಳಿದ್ದ ದರ್ಶನ್ ಗೌಡನನ್ನು ಈಚೆಗಷ್ಟೇ ಪೊಲೀಸರು ಬಂಧಿದ್ದಾರೆ. ಜೊತೆಗೆ ಕೋರಮಂಗಲದಲ್ಲಿ ನೆಲಮಂಗಲ ಕಾನ್‌ಸ್ಟೇಬಲ್ ಮೋಹನ್ ಕುಮಾರ್ ಹಾಗೂ ರಾಮಮೂರ್ತಿನಗರ ಪೊಲೀಸರು ಹರೀಶ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 3 ನಂಬರ್‌ನಿಂದ ನನಗೆ ಕಿರಿಕಿರಿ, ಧಮ್ಕಿ, ಬೆದರಿಕೆ ಕರೆಗಳು ಬರುತ್ತಿದೆ: ಮುತಾಲಿಕ್
ಪ್ರತ್ಯೇಕವಾಗಿ ಮೂರು ಕೇಸ್ ದಾಖಲಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬೆಂಗಳೂರಿನ ರಾಮಮೂರ್ತಿನಗರ, ಕೋರಮಂಗಲ ಠಾಣೆ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.